ಕರೊನಾ ಲಾಕ್​ಡೌನ್; ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್​ ಸಮಾಧಿ ಬಳಿ ನೀರವ ಮೌನ..

ರಾಜ್ ಸಮಾಧಿ
Published on

ಬೆಂಗಳೂರು: ಕರೊನಾ ಹಾವಳಿ ಇರಲಿಲ್ಲ ಎಂದಿದ್ದರೆ ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ ಸಮಾಧಿ ಬಳಿ ಸಾವಿರಾರು ಮಂದಿ ಆಗಮಿಸಿ ಅಣ್ಣಾವ್ರ ಸಮಾಧಿಗೆ ನಮಸ್ಕರಿಸಿ ತೆರಳಿರುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾರೂ ಇಲ್ಲದೆ ಸಮಾಧಿ ಭಣಗುಡುತ್ತಿತ್ತು. ಆದರೂ ಕೆಲವರು ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ನಿಯಮವನ್ನು ಬದಿಗೊತ್ತಿ ಅಣ್ಣಾವ್ರ ಸಮಾಧಿಗೆ ಪುಷ್ಪ ಅರ್ಪಿಸಿ ಕೆಲಹೊತ್ತು ವಿಶ್ರಮಿಸಿ ಮನೆಗೆ ಮರಳಿದರು. ಇನ್ನು ಡಾ. ರಾಜ್​ ಹಿರಿಮಗ ಶಿವರಾಜ್​ಕುಮಾರ್​ ಬೆಳಗ್ಗೆ ಬೇಗನೆ ಬಂದು ತಂದೆಯವರ ಸಮಾಧಿಗೆ ಪೂಜೆ ಮಾಡಿ ಮರಳಿದರು.
ಇನ್ನು ಲಾಕ್​ಡೌನ್​ ಹಿನ್ನೆಲೆಯಲ್ಲಿ ಡಾ. ರಾಜ್ ಸಮಾಧಿ ಬಳಿ ಯಾರೂ ಹೋಗಬೇಡಿ. ಮನೆಯಲ್ಲಿದ್ದುಕೊಂಡೇ ನಮಸ್ಕರಿಸಿದರೆ ಸಾಕು ಅವರ ಆಶೀರ್ವಾದ ಸಿಕ್ಕಂತೆ ಎಂದು ಡಾ. ರಾಜ್​ ಪುತ್ರ ರಾಘವೇಂದ್ರ ರಾಜ್​ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ, ಸಮಾಧಿ ಬಳಿ ಬೆರಳೆಣಿಕೆಯಷ್ಟು ಜನ ಮಾತ್ರ ಕಾಣಿಸಿಕೊಂಡು, ಸರ್ಕಾರದ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಿದ್ದಾರೆ. ಎಂದಿನಂತೆ ಅಪ್ಪಾಜಿ ಅವರ ಪುಣ್ಯ ಸ್ಮರಣೆಯನ್ನು ಮನೆಯಲ್ಲಿಯೇ ಸರಳವಾಗಿ ಅವರ ಫೋಟೋಕ್ಕೆ ಪೂಜೆ ಮಾಡುವ ಮೂಲಕ ಆಚರಿಸಿದ್ದಾರೆ ರಾಘವೇಂದ್ರ ರಾಜ್​ಕುಮಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net