ಕಲರ್ಸ್ ಕನ್ನಡದಿಂದ ವಾರಾಂತ್ಯಕ್ಕೆ ಹೊಸ ರಂಗು

PAGE 10 4
Published on

ಬೆಂಗಳೂರು: ಬಣ್ಣ ಹೊಸದಾಗಿದೆ ಎಂಬ ಉತ್ಸಾಹದಲ್ಲಿರುವ ಕಲರ್ಸ್ ಕನ್ನಡ ವಾಹಿನಿ, ಈಗ ನಿಮ್ಮ ವಾರಾಂತ್ಯಗಳನ್ನು ತುಸು ಹೆಚ್ಚೇ ರಂಗೇರಿಸಲು ಹೊರಟಿದೆ. ಇದೇ ಶನಿವಾರದಿಂದ (ಜೂನ್ 13) ನಾಲ್ಕು ಕಲರ್​ಫುಲ್ ಶೋಗಳನ್ನು ಆರಂಭಿಸುತ್ತಿದೆ. ನಾಲ್ಕು ಶೋಗಳು ನಾಲ್ಕು ಬೇರೆ ಬೇರೆ ಬಣ್ಣಗಳನ್ನು ಹೊತ್ತು ತರುತ್ತಿದ್ದು, ನಿಮ್ಮ ವಾರಾಂತ್ಯಗಳು ಹಿಂದೆಂದಿಗಿಂತ ಹೆಚ್ಚು ವರ್ಣರಂಜಿತವಾಗಿರಲಿದೆ.

ವಿಶೇಷ ಏನೆಂದರೆ ಈ ನಾಲ್ಕು ಹೊಸ ಶೋಗಳು ವೀಕ್ಷಕರನ್ನು ನಾಲ್ಕು ವಿಭಿನ್ನ ಲೋಕಗಳಿಗೆ ಕರೆದೊಯ್ಯಲಿವೆ. ಬೆಣ್ಣೆ ಕೃಷ್ಣನ ಬಾಲಲೀಲೆಗಳನ್ನು ಬಣ್ಣಿಸುವ ಪೌರಾಣಿಕ ಕತೆ ‘ದೇವಕಿ ನಂದನ’, ಶೂರ ಅಶೋಕನ ಉದಾತ್ತತೆಯನ್ನು ಬಿಂಬಿಸುವ ಐತಿಹಾಸಿಕ ಕಥಾನಕ ‘ಚಕ್ರವರ್ತಿ ಅಶೋಕ’, ಸರ್ಪಸಾಮ್ರಾಜ್ಯದ ಪ್ರೇಮ-ಪ್ರಣಯ-ಸೇಡುಗಳ ಮಾಯಾಲೋಕವನ್ನು ಬಿಚ್ಚಿಡುವ ‘ನಾಗಕನ್ನಿಕೆ’ ನಿಮ್ಮನ್ನು ಸೆಳೆಯಲಿವೆ. ಹೀಗೆ ಮೂರು ವಿಭಿನ್ನ ಕಲ್ಪನಾ ಲೋಕದಲ್ಲಿ ಮುಳುಗೇಳುವಾಗ ನಡುವೆ ಒಂದು ವಾಸ್ತವಕ್ಕೆ ಎಳೆತರುವ ಕತೆಯೂ ಇರಬೇಕಲ್ಲವೆ?

ತನ್ನ ಬದುಕಿನ ಬಣ್ಣ ಕಸಿದ ವಿಧಿಯೊಡನೆ ಹೋರಾಟಕ್ಕಿಳಿದ ಒಂಟಿ ಹುಡುಗಿಯ ಕತೆ ‘ಇವಳು ಸುಜಾತಾ’ ಧಾರಾವಾಹಿ ಆ ಕೆಲಸ ಮಾಡಲಿದೆ. ತಲಾ ಒಂದು ಗಂಟೆಯ ಈ ನಾಲ್ಕು ಧಾರಾವಾಹಿಗಳು ಶನಿವಾರ ಮತ್ತು ಭಾನುವಾರ ಎರಡೂ ದಿನ ಪ್ರಸಾರವಾಗುತ್ತವೆ. ಸಂಜೆ 5ಗಂಟೆಗೆ ‘ದೇವಕಿ ನಂದನ’, ಸಂಜೆ 6 ಗಂಟೆಗೆ ‘ಇವಳು ಸುಜಾತ’, ಸಂಜೆ 7 ಗಂಟೆಗೆ ‘ನಾಗಕನ್ನಿಕೆ’ ಹಾಗೂ ರಾತ್ರಿ 8 ಗಂಟೆಗೆ ‘ಚಕ್ರವರ್ತಿ ಅಶೋಕ’ ಧಾರಾವಾಹಿ ಮೂಡಿಬರಲಿದೆ. ಒಟ್ಟಾರೆ ಕಲರ್ಸ್ ಕನ್ನಡದ ಈ ಹೊಸ ಶೋಗಳು ನಿಮ್ಮ ವಾರಾಂತ್ಯದ ಬಣ್ಣವನ್ನು ಹೊಸದಾಗಿಸುವುದರ ಜತೆಗೆ ವಾಹಿನಿ ಜತೆಗಿನ ನಿಮ್ಮ ಬಂಧವನ್ನೂ ಬಿಗಿಗೊಳಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net