ನಟ ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರು 1999, ಆಗಸ್ಟ್ 25 ರಂದು ವಿವಾಹವಾದರು. ಸಂಗೀತಾ ಅವರು ಮೂಲತಃ ಶ್ರೀಲಂಕಾ ಮೂಲದ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದು, ಲಂಡನ್‌ನಲ್ಲಿ ನೆಲೆಸಿದ್ದರು. ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದ ಸಂಗೀತಾ, 1996ರಲ್ಲಿ ಚೆನ್ನೈಗೆ ಬಂದಿದ್ದಾಗ ವಿಜಯ್ ಅವರನ್ನು ಭೇಟಿಯಾಗಿ ಅವರ ನಟನೆಯನ್ನು ಮೆಚ್ಚಿ ಶುಭ ಕೋರಿದ್ದರು. ಈ ಪರಿಚಯವು ನಂತರ ಪ್ರೇಮಕ್ಕೆ ತಿರುಗಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಜೇಸನ್ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಗಳಿದ್ದಾಳೆ.