

54ನೇ ಅಂತರರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ವಿಜಯ್ ಸೇತುಪತಿಗೆ ಆಹ್ವಾನ.
16 ವರ್ಷಕ್ಕೆ ನಟನಾಗಲು ಬಯಸ್ಸಿದ್ದ ವಿಜಯ್ ಸೇತುಪತಿಗೆ ಅವಕಾಶ ಸಿಕ್ಕಿದ್ದು 32 ವರ್ಷಕ್ಕೆ.
ಇಂಟರ್ನ್ಯಾಶನಲ್ ಮಟ್ಟದಲ್ಲಿ ಖ್ಯಾತಿ ಗಿಟ್ಟಿಸಿಕೊಂಡ ಸೇಲ್ಸ್ಮೆನ್ , ಟೆಲಿಫೋನ್ ಬೂತ್ ಆಪರೇಟರ್ ಆಗಿ ಜೀವನ ತೊಡಗಿಸಿಕೊಂಡಿದ್ದ ವಿಜಯ್ ಸೇತುಪತಿ.
Vijay Sethupathi: ಬತ್ತಾ ಸಿನಿಮಾ ಮೂಲಕ ಸದ್ಯ ಟ್ರೆಂಡಿಗ್ನಲ್ಲಿರುವ ವಿಜಯ್ ಸೇತುಪತಿ ಅವರು, ನ್ಯೂರ್ಯಾಕ್ನಲ್ಲಿ ನಡೆಯಲಿರುವ 54ನೇ ಅಂತರರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಪ್ರೆಸೆಂಟರ್ ಆಗಿ ಭಾಗವಾಗವಹಿಸಲು ಆಹ್ವಾನ ಪಡೆಯುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರಶಸ್ತಿ ಪ್ರಸ್ತುತ ಪಡಿಸುತ್ತಿರುವ ಮೊದಲ ಭಾರತೀಯ ನಟ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ನವೆಂಬರ್ 23ರಂದು ನ್ಯೂಯಾರ್ಕ್ನಲ್ಲಿ 54 ನೇ ಅಂತರರಾಷ್ಟ್ರೀಯ ಆ್ಯಮಿ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಅಂತರರಾಷ್ಟ್ರೀಯ ಆ್ಯಮಿ ಪ್ರಶಸ್ತಿಯು, ಅಮೆರಿಕ ಹೊರೆತುಪಡಿಸಿ ಜಾಗತಿಕ ಟಿಲಿವಿಷನ್ ನೆಟ್ವರ್ಕ್, ಪ್ರಾದೇಶಿಕ ಚಾನೆಲ್, ನಿರ್ಮಾಪಕರು, ನಿರ್ದೇಶಕ, ಕಲೆ, ಡಾಕ್ಯುಮೆಂಟರಿ, ಡ್ರಾಮಾ ಸೀರೀಸ್ ಅತ್ಯುತ್ತಮ ಹಾಗೂ ಸಾಧನೆ ಗುರುತಿಸಿ ನೀಡಲಾಗುವ ಪ್ರಶಸ್ತಿಯಾಗಿದೆ. ನ್ಯೂಯಾರ್ಕ್ ಮೂಲದ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಆಂಡ್ ಸೈನ್ಸಸ್ ಸಂಸ್ಥೆ ಪ್ರತಿ ವರ್ಷ ನವೆಂಬರ್ನಲ್ಲಿ ಪ್ರಶಸ್ತಿಯನ್ನು ನೀಡುತ್ತದೆ.
ಇಂಟರ್ನ್ಯಾಶನಲ್ ಎಮ್ಮಿ ಅವಾರ್ಡ್ಸ್ನಲ್ಲಿ ಪ್ರಸೆಂಟರ್ ಆಗಿ ಭಾಗಿಯಾಗುತ್ತಿರುವ ವಿಜಯ್ ಸೇತುಪತಿ ಸಿನಿಮಾ ಸಾಧನೆ ಸುಲಭವಲ್ಲ. ಸಾಮಾನ್ಯ ಕುಟುಂದಲ್ಲಿ ಜನಿಸಿದ ವಿಜಯ್, ನಟನಾಗಬೇಕು ಎಂದು ಕನಸನ್ನು ಹೊತ್ತು 16ನೇ ವರ್ಷಕ್ಕೆ ಆಡಿಷನ್ಗಳನ್ನು ಎದುರಿಸಲು ಮುಂದಾದರು. ಆದರೆ, ಅವರಿಗೆ...ಸಿಕ್ಕಿದ್ದು ನಿರಾಸೆ ಮಾತ್ರ. ಅವರು ಪದೇ ಪದೆ ರಿಜೆಕ್ಟ್ ಆದರು.
ಇಷ್ಟಾಗಿಯೂ ಕುಗ್ಗದ ಅವರು, ತಮ್ಮ ಕುಟುಂಬಕ್ಕೆ ಆರ್ಥಿಕ ನೆರವಾಗಲು ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮೆನ್ ಆಗಿ, ಟೆಲಿಫೋನ್ ಬೂತ್ ಆಪರೇಟರ್ ಹಾಗೂ ಕ್ಯಾಶಿಯರ್ ಆಗಿ ಸಣ್ಣಪುಟ್ಟ ಕೆಲಸ ಮಾಡುತ್ದತಾ ಬಿಕಾಂ ಪದವಿ ಮುಗಿಸಿದರು. ದುಬೈನಲ್ಲಿ 3 ವರ್ಷಗಳ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡಿದರು.
ದುಬೈನಲ್ಲಿ ಯಾಂತ್ರಿಕ ಜೀವನದಿಂದ ಬೇಸತ್ತ ಅವರು ಭಾರತಕ್ಕೆ ಬಂದು ನಾಟಕ ತಂಡ ಕಟ್ಟಿಕೊಂಡರು. ಕೆಲಸ ಮಾಡುತ್ತ ನಾಟಕಗಳಲ್ಲಿ ತೊಡಗಿಸಿಕೊಂಡರು. ಹೀಗೆ ಸಣ್ಣಪುಟ್ಟ ನಟನೆ ಕೆಲಸ ಮಾಡುತ್ತಾ ಬಂದ 16 ವರ್ಷದ ಯುವಕನಿಗೆ ದೊಡ್ಡ ಪರದೆ ಮೇಲೆ ನಟಿಸಲು ಅವಕಾಶ ಸಿಕ್ಕಿದ್ದು 32ನೇ ವಯಸ್ಸಿನಲ್ಲಿ, ತೆನ್ಮೇರ್ಕು ಪರುವಕಾಟ್ರು ಇದು ಅವರ ಮೊದಲ ಸಿನಿಮಾ. ವಿಜಯ್ ಸೇತುಪತಿ ಇಲ್ಲಿಯವರೆಗೂ 3 ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇವರಿಗೆ ಜನರ ಸಂಪತ್ತು...ಮಕ್ಕಳಸ್ ಸೆಲ್ವನ್ ಎನ್ನುವ ಹೆಸರಿದೆ. ಇವರ ಸರಳತೆ ಇಡೀ ತಮಿಳುನಾಡು ಫಿದಾ ಆಗಿದೆ. ಆದರೆ, ಈ ವಿಚಾರವನ್ನು ಮಾತ್ರ ಅವರು ಒಪ್ಪಿಕೊಂಡಿಲ್ಲ. ಹೀಗೊಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಅವರಿಗೆ ಯುವತಿಯೊಬ್ಬರು, 'ಸರ್ ನಂಗೆ ನಿಮ್ಮ ಸಿಂಪ್ಲಿಸಿಟಿ ಇಷ್ಟ' ಎಂದಿದ್ದರು. ಆಗ ವಿಜಯ್ ಸೇತುಪತಿ ಕೊಟ್ಟ ಉತ್ತರ ಮಾತ್ರ ಶಾಕಿಂಗ್ ಆಗಿತ್ತು. ಇದು ಸಿಂಪಲ್ ಅಲ್ಲ ಇವೆಲ್ಲವೂ ದುಬಾರಿ ವಸ್ತುಗಳು. ಎಲ್ಲರೂ ಇದನ್ನು ಸಿಂಪ್ಲಿಸಿಟಿ ಎನ್ನುತ್ತಾರೆ. ನೋ ಡ್ರಾಮಾ ಇದು ಸಿಂಪಲ್ ಅಲ್ಲ ಇದು ತುಂಬಾನೆ ಕಾಸ್ಟ್ಲಿ ಶರ್ಟ್. ಕೋಟ್ ಅಥವಾ ಬ್ಲೇಜರ್ ಧರಿಸಬಹುದಾಗಿತ್ತು, ಆದರೆ ನನಗೆ ಈ ಬಟ್ಟೆ ಕಂಫರ್ಟ್ ಆಗಿದೆ. ಸಿಂಪಲ್ ಆಗಿ ಕಾಣುವ ಪ್ರತಿಯೊಂದು ತುಂಬಾನೆ ದುಬಾರಿ ಎಂದಿದ್ದರು ವಿಜಯ್.
ಬಿಗ್ಬಾಸ್ ತಮಿಳು ಜೊತೆಗೆ ವಿಜಯ್ ಸೇತುಪತಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಿರ್ದೇಶಕ ಮಣಿರತ್ನಂ ನಿರ್ದೇಶನದ ಇಂಜಿ ವೆಲ್ಲಮ್ ಸಿನಿಮಾ 2027 ಜನವರಿಯಲ್ಲಿ ರಿಲೀಸ್ ಆಗಲಿದೆ. ಎಆರ್ ರೆಹಮಾನ್ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಪಿಪಾಸು2, ಮಹಾರಾಜ 2, ಸ್ಲಮ್ ಡಾಗ್ 33 ಟೆಂಪಲ್ ರೋಡ್, ಟ್ರೇನ್, ಪಾಕೆಟ್ ನಾವೆಲ್ ಅವರ ಮುಂದಿನ ಪ್ರಾಜೆಕ್ಟ್.
ಬಾಲಾಜಿ ತರಣೀತರನ್ ನಿರ್ದೇಶನದ ಬತ್ತಾ ಸಿನಿಮಾಕ್ಕೆ ಒಟಿಟಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಾಲ ನಟ ಸಾಯಿ ಪೃಥ್ವಿರಾಜ್ ಹಾಗೂ ವಿಜಯ್ ಸೇತುಪತಿ ನಟನೆ ಬಗ್ಗೆ ಭಾರಿ ಪ್ರಶಂಸಿಸಲಾಗುತ್ತಿದೆ. 1986 ರಲ್ಲಿ ಮದ್ರಾಸ್ನಲ್ಲಿ ನಡೆಯುವ ಸಿನಿಮಾ ಕತೆ ಇದು. ಪ್ರಬಲ ರೌಡಿಯನ್ನು ಶೌಚಾಲಯದಲ್ಲಿ ಬಂಧಿಸುವ ಬಾಲಕ ಹಾಗೂ ರಾಡಿಯ ಭಾವನಾತ್ಮಕ ಪ್ರಸಂಗಗಳ ಸುತ್ತ ಸಿನಿಮಾವನ್ನು ಹೆಣೆಯಲಾಗಿದೆ.
2016ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆದ 68 ನೇ ಪ್ರೈಮ್ಟೈಮ್ ಆ್ಯಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಅವರು ವೈಯಕ್ತಿಕವಾಗಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು, (ಏಜೆನ್ಸೀಸ್).