ಅಂದಹಾಗೆ, ನಟ ವಿಜಯ್ ಮತ್ತು ತ್ರಿಷಾ ನಡುವೆ ಲವ್ ಅಫೇರ್ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. ಯಾವಾಗ ವಿಜಯ್ ಅವರು ರಾಜಕೀಯಕ್ಕೆ ಇಳಿದರೋ ಈ ಚರ್ಚೆ ಜೋರಾಗ ತೊಡಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್ ಮತ್ತು ತ್ರಿಷಾ ಪ್ರೈವೆಟ್ ಜೆಟ್ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು.