ಉಪ್ಪಿದಾದ ಬೆಡಗಿ ಉಮಾ ಶಂಕರಿಗೆ ಸ್ತನ ಕ್ಯಾನ್ಸರ್​; ನಟಿ ಹಂಚಿಕೊಂಡ ಪೋಸ್ಟ್​ನಲ್ಲೇನಿದೆ ಗೊತ್ತಾ..? Uma Shankari

Uma Shankari (ಚಿತ್ರ Instagram)
Uma Shankari (ಚಿತ್ರ Instagram)
Published on
Uma Shankari: ಉಪ್ಪಿದಾದ ಎಂಬಿಬಿಎಸ್​ ಚಿತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ನಟಿ ಉಮಾ ಶಂಕರಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಆಘಾತಕಾರಿ ಸುದ್ದಿಯನ್ನು ನಟಿ ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದು, ಸದ್ಯ ಅವರ ಈ ಭಾವನಾತ್ಮಕ ಪೋಸ್ಟ್ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.
ಮದುವೆಯ ನಂತರ ನಟನೆಯಿಂದ ದೂರ ಸರಿಯುವ ಮೊದಲು ಹಲವಾರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ, ಇತ್ತೀಚೆಗೆ ತಮಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈಗ ಅವರ ಚಿಕಿತ್ಸೆ ಪ್ರಗತಿಯಲ್ಲಿದ್ದು, ಎರಡನೇ ಸುತ್ತಿನ ಕಿಮೊಥೆರಪಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.
ಕ್ಯಾನ್ಸರ್ ರೋಗನಿರ್ಣಯದ ಬಗ್ಗೆ ತಿಳಿದ ನಂತರದ ಮೊದಲ ಕೆಲವು ದಿನಗಳು ತಮಗೆ ಭಾವನಾತ್ಮಕವಾಗಿ ಅತ್ಯಂತ ಅಗಾಧವಾಗಿದ್ದವು ಮತ್ತು ತಮ್ಮ ಈ ಆರೋಗ್ಯ ಸ್ಥಿತಿಯ ವಾಸ್ತವತೆಯನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು ಎಂದು ನಟಿ ಉಮಾ ಶಂಕರಿ ಹೇಳಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಪ್ರಸ್ತುತ ನಾನು ಎರಡನೇ ಸುತ್ತಿನ ಕೀಮೋಥೆರಪಿ ಮತ್ತು ಇಮ್ಯೂನೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದು, ಪ್ರತಿಯೊಂದು ದಿನವನ್ನೂ ಧೈರ್ಯದಿಂದ ಎದುರಿಸುತ್ತಿದ್ದೇನೆ. ಆದಾಗ್ಯೂ, ನೋವಿನಿಂದ ಕೂಡಿರುವ ಭಾರವಾದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ. ಜೊತೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿ ಎಂದು ಭಾವಿಸುವ ದಿನಗಳನ್ನು ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಉಮಾ ಶಂಕರಿ ಪೋಸ್ಟ್!

ಇದೇ ವೇಳೆ, ಈ ಕಷ್ಟದ ಸಂದರ್ಭದಲ್ಲಿ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿರುವ ಕುಟುಂಬಸ್ಥರಿಗೆ ಹಾಗೂ ಅಪಾರ ಪ್ರೀತಿ ಮತ್ತು ಧೈರ್ಯ ನೀಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದು, ತಾವು ಚಿಕಿತ್ಸೆಗೆ ಸ್ಪಂದಿಸುತ್ತಾ ಗುಣಮುಖರಾಗುವತ್ತ ಸಂಪೂರ್ಣ ಗಮನವನ್ನು ಹರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ತಮ್ಮ ಅನಾರೋಗ್ಯದ ಕುರಿತು ಮಾತನಾಡಿದ್ದ ನಟಿ ಉಮಾ ಶಂಕರಿ, ಕ್ಯಾನ್ಸರ್ ರೋಗನಿರ್ಣಯದ ಆರಂಭಿಕ ದಿನಗಳಲ್ಲಿ ತಮಗಾದ ಭಾವನಾತ್ಮಕ ನೋವಿನ ಬಗ್ಗೆ ಹಂಚಿಕೊಂಡಿದ್ದರು. ಇದು ನನಗೆ ಹೇಗೆ ಸಂಭವಿಸಿತು? ಮತ್ತು ನನಗೆ ಈ ಕಾಯಿಲೆ ಏಕೆ ಬಂತು ಮುಂತಾದ ಪ್ರಶ್ನೆಗಳಿಂದ ತಮ್ಮ ಮನಸ್ಸು ಸದಾ ತುಂಬಿರುತ್ತಿತ್ತು ಎಂದು ಹೇಳಿದ್ದಾರೆ. ಆದಾಗ್ಯೂ, ತಮಗೆ ಬಂದಿರುವ ರೋಗನಿರ್ಣಯವನ್ನು ಮನಸ್ಸುಪೂರ್ವಕವಾಗಿ ಸ್ವೀಕರಿಸುವುದು ಈ ಇಡೀ ಪ್ರಯಾಣದ ಅತ್ಯಂತ ಕಷ್ಟಕರವಾದ ಭಾಗಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net