ರೇಸಿಂಗ್ ಸ್ಥಳಕ್ಕೆ ಧಾವಿಸಿ ಬಂದ ವಿಜಯ್, ಅಜಿತ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡ ವಿಡಿಯೋ ಎಲ್ಲೆಡೆ ಹಂಚಿಕೆಯಾಗಿದೆ. ರೇಸಿಂಗ್ ಸರ್ಕ್ಯೂಟ್‌ಗೆ ತಲುಪುವ ಮೊದಲು, ತ್ರಿಶಾ ಲಂಡನ್‌ನಲ್ಲಿ ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ರಾಧಿಕಾ ಅವರು ತ್ರಿಶಾ ಜೊತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಕೂಡ ವೈರಲ್ ಆಗಿತ್ತು. ಅಜಿತ್ ಅವರ ರೇಸ್‌ಗಾಗಿ ರಾಧಿಕಾ ಕೂಡ ಲಂಡನ್‌ನಲ್ಲಿದ್ದಾರೆ.