ಚಿತ್ರರಂಗ ಬಿಟ್ಟಿರುವೆ, ಉದ್ಯಮಿ ಜೊತೆ ಮದುವೆ! ನಟಿ ತ್ರಿಷಾ ಮಾತಿಗೆ ಟ್ರೋಲಿಗರೇ ಗಪ್​ಚುಪ್​​

ನಟಿ ತ್ರಿಷಾ ಕೃಷ್ಣನ್​
ನಟಿ ತ್ರಿಷಾ ಕೃಷ್ಣನ್​
Published on
ಚೆನ್ನೈ: ತಮಿಳು ಸ್ಟಾರ್ ನಟ, ದಳಪತಿ ವಿಜಯ್​ ಜೊತೆಗೆ ಮದುವೆ ಸಮಾರಂಭಗಳಲ್ಲಿ ಕಾಣಿಸಿಕೊಂಡ ದಿನದಿಂದಲೂ ನಟಿ ತ್ರಿಷಾ ಕೃಷ್ಣನ್​ ವಿರುದ್ಧ ನೆಗೆಟಿವ್​ ಟ್ರೋಲ್​ಗಳ ಸುರಿಮಳೆಯೇ ಹರಿದುಬರುತ್ತಿವೆ. ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಲು ತ್ರಿಷಾನೇ ಕಾರಣ ಎಂದು ಬೆಟ್ಟು ಮಾಡಿ ದೂಷಿಸುತ್ತಿರುವ ನೆಟ್ಟಿಗರು, ಸೋಷಿಯಲ್ ಮೀಡಿಯಾ ತುಂಬ ವಿಜಯ್​-ತ್ರಿಷಾ ಹೆಸರನ್ನು ಚರ್ಚೆಗೆ ತರುತ್ತಿದ್ದಾರೆ. ಇದನ್ನೆಲ್ಲ ನೋಡಿ ನೋಡಿ ಸಾಕಾಗಿರುವ ನಟಿ, ಕಡೆಗೂ ಒಂದಷ್ಟು ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.   
ತ್ರಿಷಾ ಶೀಘ್ರದಲ್ಲೇ ಚಿತ್ರರಂಗದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳೂ ಕೇಳಿಬಂದಿದ್ದೇ ತಡ, ಗರಂ ಆದ ನಟಿ, ನಾನು ಚಿತ್ರರಂಗಕ್ಕೆ ಗುಡ್​ಬೈ ಹೇಳಿದ್ದೀನಿ. ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆ ಆಗಿದ್ದೀನಿ. ನಾಲ್ವರು ಮಕ್ಕಳಿದ್ದಾರೆ. ಅವರಿಗೆ ನಿನ್ನೆಯಷ್ಟೇ ಎರಡು ವರ್ಷ ತುಂಬಿದೆ. ಇದು ಸರಿ ಇದ್ಯಾ ಅಥವಾ ಇನ್ನೂ ಏನಾದರೂ ಸೇರಿಸದೆ ಬಿಟ್ಟಿದ್ದೀನಾ? ನೋಡಿ ಹೇಳಿ ಎಂದು ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಥೆ ಕಟ್ಟುವ ಟ್ರೋಲರ್​ಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದಾರೆ.  
ಇಲ್ಲಿ ತ್ರಿಷಾ ಎರಡು ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಮೊದಲನೆಯದು, ನಾನು ನಟನೆಗೆ ನಿವೃತ್ತಿ ಘೋಷಿಸಿಲ್ಲ ಎಂದು. ಎರಡನೆಯದು, ನನಗೆ ಯಾರೊಂದಿಗೂ ಮದುವೆ ಆಗಿಲ್ಲ ಎಂಬುದು. ಕಳೆದ ಕೆಲವು ತಿಂಗಳುಗಳಿಂದ ತನ್ನ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಮಾತನಾಡುತ್ತಿರುವ ನೆಟ್ಟಿಗರ ನಡೆಗೆ ಬೇಸತ್ತು ತ್ರಿಷಾ ಈ ರೀತಿ ಪೋಸ್ಟ್​ ಹಂಚಿಕೊಂಡಿರುವುದು ಸ್ಪಷ್ಟ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net