ಕಳೆದ ಹಲವು ವರ್ಷಗಳಿಂದ ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಲೇ ಇತ್ತು. ಇದು ಕಾಲಿವುಡ್ ಅಂಗಳದಲ್ಲಿ ದೊಡ್ಡ ವದಂತಿಯಾಗಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲೂ ವಿಜಯ್ ಅಥವಾ ತ್ರಿಷಾ ಆಗಲಿ, ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ, ವಿಜಯ್ ಡಿವೋರ್ಸ್ ಸುದ್ದಿ ಹೊರಬಿದ್ದಾಗಿನಿಂದಲೂ ನಟಿಯ ಹೆಸರು ಮತ್ತೆ ಜೋರಾಗಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದು, ಇತ್ತೀಚಿಗೆ ಅವರಿಬ್ಬರು ಮದುವೆ ಸಮಾರಂಭಕ್ಕೆ ಭೇಟಿ ಕೊಟ್ಟ ಕ್ಷಣ. ಈ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.