ಚೊಚ್ಚಲ ಚಿತ್ರದಲ್ಲಿ ಹೀರೋ, ನಾಯಕ ನಟಿಯಾಗಿ ಹೊರಹೊಮ್ಮುವ ಆಸೆಯನ್ನು ಹೊತ್ತುಕೊಂಡು ಬರುವ ಅದೆಷ್ಟೋ ಕಲಾವಿದರು ಕೆಲವರು ಹಿಯಾಳಿಸುವ ರೀತಿಗೆ ಸೋತು, ವೃತ್ತಿಯಿಂದಲೇ ಎಕ್ಸಿಟ್ ಆಗಿಬಿಡುತ್ತಾರೆ. ಚುಚ್ಚು ಮಾತುಗಳಿಗೆ ನಾಯಕರಾಗಿರುವ ಅಂಥವರ ಮಾತುಗಳನ್ನು ಮನಸ್ಸಿಗೆ ತೆಗೆದುಕೊಂಡು ತಮ್ಮ ಕನಸನ್ನೇ ಮೊಟಕುಗೊಳಿಸುತ್ತಾರೆ. ಇನ್ನು ಕೆಲವರು ಎಷ್ಟೇ ಅಣಕಿಸಿ ಮಾತನಾಡಿದರು, ಕುಗ್ಗಿಸಲು ಪ್ರಯತ್ನಿಸಿದರು, ಅದಕ್ಕೆ ಜಗ್ಗದೆ ತಮ್ಮ ಸಾಧನೆ ಮುಖೇನ ಉತ್ತರಿಸುತ್ತಾರೆ. ಅದಕ್ಕೆ ಈ ನಟ ಕೂಡ ಒಂದು ಅತ್ಯುತ್ತಮ ಉದಾಹರಣೆ.