ಚೆನ್ನೈ: ತಮಿಳುನಾಡಿನ ಸ್ಟಾರ್ ನಟ ಸೂರ್ಯ ಅವರು ಯಾವ ಸಿನಿಪ್ರಿಯರಿಗೆ ಗೊತ್ತಿಲ್ಲ ಹೇಳಿ? ತಮ್ಮ ಖಡಕ್ ನಟನೆ, ಗತ್ತು ಮತ್ತು ಬ್ಯಾಕ್ ಟು ಬ್ಯಾಕ್ ಸೂಪರ್ಹಿಟ್ ಚಿತ್ರಗಳ ಮೂಲಕ ಇಂದು ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯ, ಕೇವಲ ತಮಿಳು ಮಾತ್ರವಲ್ಲದೇ, ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಸಿಕರಿಗೂ ಚಿರಪರಿಚಿತ. ಕಳೆದ ವರ್ಷ 'ರೆಟ್ರೋ' ಮುಖೇನ ಚಿತ್ರರಂಗಕ್ಕೆ ಎಂಟ್ರಿಕೊಟ್ಟ 'ಸಿಂಗಂ', ಈಗ ಮತ್ತೊಂದು ಹೊಸ ಸಿನಿಮಾ ಮುಖಾಂತರ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಈ ಮಧ್ಯೆ, ಅವರ ತಂದೆ ಬಿಚ್ಚಿಟ್ಟ ಕೆಲ ಕುತೂಹಲಕಾರಿ ಸಂಗತಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.