ರಸ್ತೆ ಬದಿ ಟೀ ಕುಡಿಯುತ್ತಾ ಸ್ಟಾರ್​ ನಟರ ಹರಟೆ: ಅಭಿಮಾನಿಗಳ ಕಲ್ಪನೆಯನ್ನು ವಾಸ್ತವಕ್ಕೆ ತಂದ ಎಐ! Superstars

ಕೃತಕ ಬದ್ಧಿಮತ್ತೆ ರಚಿತ ತಮಿಳು ಕಲಾವಿದರ ಚಿತ್ರ
ಕೃತಕ ಬದ್ಧಿಮತ್ತೆ ರಚಿತ ತಮಿಳು ಕಲಾವಿದರ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಾ ನಿಂತ ತಮಿಳು ಸಿನಿಮಾದ ಸ್ಟಾರ್​ ನಟರು
  • ಅಭಿಮಾನಿಗಳ ಆಸೆಯನ್ನು ಈಡೇರಿಸಿದ ಕೃತಕ ಬದ್ಧಿಮತ್ತೆ
  • ಮನುಷ್ಯನ ಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಕೃತಕ ಬದ್ಧಿಮತ್ತೆ ಪಾತ್ರ ಪ್ರಮುಖ
Superstars : ಮನುಷ್ಯನ ಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಕೃತಕ ಬದ್ಧಿಮತ್ತೆ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಸಿನಿಮಾ ರಂಗದ ಎಲ್ಲ ಕಲಾವಿದರು ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ ಬಿಟ್ಟು ಬೇರೆ ಎಲ್ಲೂ ಒಟ್ಟಿಗೆ ಸೇರುವುದಿಲ್ಲ. ಅದರಲ್ಲೂ ನಮ್ಮ, ನಿಮ್ಮಂತೆ ಟೀ ಅಂಗಡಿಯ ಮುಂದೆ ನಿಂತು ಸ್ನೇಹಿತರ ಜತೆ ಹರಟೆ ಒಡೆಯುವ ರೀತಿ ಕಲಾವಿದರು ಕಾಣಸಿಕೊಳ್ಳುವುದೇ ಇಲ್ಲ. ಆದರೆ, ಆ ರೀತಿ ಒಟ್ಟಿಗೆ ಕಾಣಿಸಿಕೊಳ್ಳಲಿ ಎಂಬ ಆಸೆ ನಮ್ಮಲ್ಲಿ ಇರುತ್ತದೆ. ಆ ಆಸೆಯನ್ನು ನನಸು ಮಾಡುವಲ್ಲಿ ಎಐ ನಿಜಕ್ಕೂ ಉಪಕಾರಿಯಾಗಿದೆ.
ತಮಿಳು ಸಿನಿಮಾ ರಂಗದ ಸೂಪರ್‌ಸ್ಟಾರ್‌ಗಳಾದ ರಜಿನಿಕಾಂತ್, ಕಮಲ್ ಹಾಸನ್, ವಿಜಯ್​ ಮತ್ತು ಅಜಿತ್,​ ರಸ್ತೆ ಬದಿಯ ಟೀ ಅಂಗಡಿಯ ಮುಂದೆ ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಮೊದಲ ನೋಟದಲ್ಲಿ ಅದೊಂದು ನಿಜವಾದ ಫೋಟೋ ಎಂಬಂತೆಯೇ ಭಾಸವಾಗುತ್ತದೆ. ಆದರೆ, ಅದು ಕೃತಕ ಬುದ್ಧಿಮತ್ತೆ ರಚನೆ ಮಾಡಿರುವಂತಹ ಅದ್ಭುತ ಫೋಟೋಗಳು.
ಅಜಿತ್, ರಜಿನಿಕಾಂತ್, ಕಮಲ್ ಹಾಸನ್, ವಿಕ್ರಮ್, ವಿಜಯ್, ಸೂರ್ಯ, ಧನುಷ್ ಮತ್ತು ಶಿವಕಾರ್ತಿಕೇಯನ್ ಒಟ್ಟಿಗೆ ಇರುವ ಎಐ ಫೋಟೋಗಳು ಕೂಡ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅದನ್ನು ನೋಡಿದ ಅಭಿಮಾನಿಗಳು ಒಂದು ಕ್ಷಣ ತಮ್ಮ ಕಣ್ಣನ್ನೇ ತಾವು ನಂಬುತ್ತಿಲ್ಲ. ಅಷ್ಟರಮಟ್ಟಿಗೆ ಎಐ ಫೋಟೋಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿವೆ.
ಈ AI ಫೋಟೋಗಳನ್ನು ಹುಹು ಕ್ರಿಯೇಷನ್ಸ್80 ಎಂಬ ಇನ್‌ಸ್ಟಾಗ್ರಾಮ್ ಪೇಜ್​ ಹಂಚಿಕೊಂಡಿದ್ದು, "ತಮಿಳು ವೀರರ ತಂಡ ವಿಹಾರ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಫೋಟೋಗಳನ್ನು ಹೊಸ ನ್ಯಾನೋ ಬನಾನಾ ಪ್ರೊ AI ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ.
ಫೋಟೋದಲ್ಲಿ ಅಜಿತ್ ಮತ್ತು ರಜನಿಕಾಂತ್ ಶರ್ಟ್​ ಮತ್ತು ಪಂಚೆ ಧರಿಸಿದ್ದಾರೆ. ವಿಕ್ರಮ್​ ಅವರು ಬನಿಯನ್​ ಧರಿಸಿ, ಪಂಚೆ ತೊಟ್ಟಿದ್ದಾರೆ. ಒಂದು ಫೋಟೋದಲ್ಲಿ ನಟ ಸೂರ್ಯ ಶರ್ಟ್​ ಮತ್ತು ಪಂಚೆ ಧರಿಸಿ, ಪರೋಟಾ ಪ್ಲೇಟ್​ ಹಿಡಿದುಕೊಂಡಿಕೊಂಡಿದ್ದಾರೆ. ಸ್ಟಾರ್​ ನಟರು ಒಟ್ಟಾಗಿ ಹರಟೆ ಹೊಡೆಯುತ್ತಿರುವ ದೃಶ್ಯಗಳು ವೈರಲ್​ ಫೋಟೋಗಳಲ್ಲಿವೆ.
ವೈರಲ್​ ಫೋಟೋಗಳನ್ನು ನೋಡಿದ ಅಭಿಮಾನಿಗಳು ತಮ್ಮ ಹುಬ್ಬೇರಿಸಿದ್ದು, ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ಇದು ನಿಜವಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎಂದು ಕೆಲವು ಅಭಿಮಾನಿಗಳು ಪ್ರಶ್ನೆ ಮಾಡಿದರೆ, ಅಭಿಮಾನಿಗಳ ಕಲ್ಪನೆಯನ್ನು ವಾಸ್ತವಕ್ಕೆ ತಂದ ಕೃತಕ ಬುದ್ಧಿಮತ್ತೆಗೆ ಧನ್ಯವಾದಗಳು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್​ ಮೂಲಕ ತಿಳಿಸಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net