ಅದೊಂದು ಕಾರಣಕ್ಕೆ ಆತನ 19 ಆಫರ್​ ರಿಜೆಕ್ಟ್​ ಮಾಡಿದ್ದೀನಿ! ಖ್ಯಾತ ನಟನ ಬಗ್ಗೆ ಹಾಟ್​ಬ್ಯೂಟಿ ಸೋನಾ ಓಪನ್ ಟಾಕ್​

ತಮಿಳು ನಟ ವಡಿವೇಲು ಮತ್ತು ನಟಿ ಸೋನಾ ಹೈದೆನ್​
ತಮಿಳು ನಟ ವಡಿವೇಲು ಮತ್ತು ನಟಿ ಸೋನಾ ಹೈದೆನ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳು ಹಾಸ್ಯನಟ ವಡಿವೇಲು ವಿರುದ್ಧ ಶಾಕಿಂಗ್ ಹೇಳಿಕೆ
  • ಇಲ್ಲಿ ಯಾರನ್ನು ನಂಬಲು ಆಗೋದಿಲ್ಲ
  • ಕೆಲವೊಂದು ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಕಷ್ಟಸಾಧ್ಯ
ಚೆನ್ನೈ: ತಮಿಳಿನ ಜನಪ್ರಿಯ ನಟ ವಡಿವೇಲು ಅವರಿಗೆ ತಮಿಳು ಮಾತ್ರವಲ್ಲ ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವಿದೆ. ಒಂದು ಸಮಯದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದ ಬಹುತೇಕ ಕಾಲಿವುಡ್​ ಚಿತ್ರಗಳಲ್ಲಿ ವಡಿವೇಲು ಅವರ ನಟನೆ ಇರುತ್ತಿತ್ತು. ತಮ್ಮ ಕಾಮಿಡಿ ಪಾತ್ರಗಳಿಂದಲೇ ಸಿನಿಪ್ರಿಯರನ್ನು ನಕ್ಕು ನಗಿಸುವ ಕಲಾವಿದನ ಹೆಸರಿಗೆ ಹಲವಾರು ವಿವಾದಗಳು ಕೂಡ ಸಿಕ್ಕಿ ಹಾಕಿಕೊಂಡಿವೆ. ಅಂತೆಯೇ, ನಟಿಯೊಬ್ಬರ ಹೇಳಿಕೆ ಸದ್ಯ ಕಾಲಿವುಡ್​ನಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. 
ಇತ್ತೀಚೆಗಷ್ಟೇ, ಫಹಾದ್​ ಫಾಸಿಲ್​ ಅಭಿನಯದ 'ಮಾರಿಸನ್' ಚಿತ್ರದಲ್ಲಿ ಕಾಣಿಸಿಕೊಂಡ ವಡಿವೇಲು, ಈ ಸಿನಿಮಾದಲ್ಲಿ ಚಿತ್ರಪ್ರೇಮಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾದರು. ಆದರೆ, ​ನಟಿ ಸೋನಾ ಹೈದೆನ್ ಅವರು ಸಂದರ್ಶನದಲ್ಲಿ ಮಾಡಿರುವ ಕಮೆಂಟ್​ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವಿವಾದವನ್ನು ಸೃಷ್ಟಿಸಿದೆ. ಈ ಹಿಂದೆ, ವಡಿವೇಲು ಜೊತೆ ನಟಿಸಿರುವ ಸೋನಾ,  ​ಒಂದು ಹಂತದಲ್ಲಿ, ನನಗೆ ನಟನಾ ವೃತ್ತಿಗೆ ಗುಡ್​ಬೈ ಹೇಳಬೇಕು ಎಂದು ಅನಿಸಿತು ಎಂದಿದ್ದಾರೆ.

ಯಾರನ್ನು ನಂಬಬೇಕು? 

ಚಿತ್ರರಂಗದಲ್ಲಿ ನೀವು ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂಬುದು ತಿಳಿಯೋದಿಲ್ಲ. ನನಗಂತು ಯಾರೊಬ್ಬರನ್ನೂ ನಂಬೋದೇ ಬೇಡ ಎಂದನಿಸಿತು. ಕೆಲವರಿಂದ ತುಂಬ ಕಷ್ಟಗಳನ್ನು ಅನುಭವಿಸಿದೆ ಮತ್ತು ಸಹಿಸಿಕೊಂಡೆ. ಅದೇ ಕಾರಣಕ್ಕೆ, ಕೆಲ ಸಮಯ ಚಿತ್ರರಂಗದಿಂದ ದೂರ ಉಳಿದುಬಿಟ್ಟೆ. ವಡಿವೇಲು ಜೊತೆಗೆ ನಟಿಸಲು ನನಗೆ ಬರೋಬ್ಬರಿ 16 ಆಫರ್​ಗಳು ಹುಡುಕಿಕೊಂಡು ಬಂದಿತು. ಆದ್ರೆ, ಅದೆಲ್ಲವನ್ನೂ ರಿಜೆಕ್ಟ್​ ಮಾಡಿದೆ. ಯಾಕಂದರೆ, ಆತನೊಟ್ಟಿಗೆ ನನಗೆ ನಟಿಸಲು ಇಷ್ಟವಿಲ್ಲ ಎಂದರು.

ನಾನಲ್ಲ! ಯಾರೊಬ್ಬರು ಕೂಡ...

ಆ ನಟನನ್ನು ಸಹಿಸಿಕೊಳ್ಳುವುದು ಕಷ್ಟಸಾಧ್ಯ. ನನ್ನಿಂದ ಅದು ಆಗಲ್ಲ. ಅದೇ ಕಾರಣಕ್ಕೆ, ಅವರೊಂದಿಗೆ ನಟಿಸಲು ನನಗೆ ಇಷ್ಟವಿಲ್ಲ. ನಾನೊಬ್ಬಳೇ ಅಂತಲ್ಲ! ಯಾರಿಂದಲೂ ವಡಿವೇಲು ಅವರನ್ನು ಹ್ಯಾಂಡಲ್ ಮಾಡಲು ಸಾಧ್ಯವಿಲ್ಲ. ಕೆಲವೊಂದು ವಿಷಯಗಳನ್ನು ನಾನಿಲ್ಲಿ ಓಪನ್ ಆಗಿ ಹೇಳಲು ಆಗೋದಿಲ್ಲ. ನನ್ನ ಸ್ವಾಭಿಮಾನಕ್ಕಿಂತ ಹೆಚ್ಚು ಯಾವುದೂ ಅಲ್ಲ ಎಂದು ಸೋನಾ ಹೇಳಿದ್ದಾರೆ. ನಟಿಯ ಈ ಕಾಮೆಂಟ್​ಗಳು ಕಾಲಿವುಡ್​ನಲ್ಲಿ ಹೊಸ ವಿವಾದಕ್ಕೆ ಗ್ರಾಸವಾಗಿದ್ದು, ನಟಿಯ ಸಮಸ್ಯೆ ಏನಿರಬಹುದು ಎಂಬ ಪ್ರಶ್ನೆಯನ್ನು ಉದ್ಬವಿಸಿದೆ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net