ಸೀರೆ ಕೇವಲ ಸಾಂಪ್ರದಾಯಿಕ ಉಡುಗೆಯಲ್ಲ ಅದು ಹೆಣ್ಣಿಗೆ... ನಟಿ ಶಾಮ್ನಾ ಕಾಸಿಂರಿಂದ ಬೋಲ್ಡ್​ ಮಾತು..! Shamna Kasim

ಸೀರೆಯ ಮೇಲಿನ ತಮ್ಮ ವ್ಯಾಮೋಹವನ್ನು ಹಂಚಿಕೊಂಡಿರುವ ಶಾಮ್ನಾ, "ಸೀರೆ ಕೇವಲ ಸಾಂಪ್ರದಾಯಿಕ ಉಡುಪು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅದು ಹಾಗಲ್ಲ, ಹೆಣ್ಣಿಗೆ ಸೀರೆಯೇ ಅತ್ಯಂತ ಸುಂದರವಾದ ಮತ್ತು ಸೆಕ್ಸಿಯಾದ ಉಡುಗೆಯಾಗಿದೆ ಎಂದು ಶಾಮ್ನಾ ಹೇಳಿದ್ದಾರೆ.
Shamna Kasim
ನಟಿ ಶಾಮ್ನಾ ಕಾಸಿಂ
Published on: 

ಚೆನ್ನೈ: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿರುವ ನಟಿ ಶಾಮ್ನಾ ಕಾಸಿಂ ( Shamna Kasim ), ತಮ್ಮ ವೇಷಭೂಷಣ ಮತ್ತು ಸೀರೆಯ ಮೇಲಿನ ಪ್ರೀತಿಯ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ‘ನಿಯೋ ಪ್ರೈಮ್’ (Neo Prime) ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಾಮ್ನಾ, ಸೀರೆಯನ್ನು ಕೇವಲ ಸಾಂಪ್ರದಾಯಿಕ ಉಡುಗೆಯಾಗಿ ಮಾತ್ರ ನೋಡಬಾರದು, ಅದು ಹೆಣ್ಣಿಗೆ ಅತ್ಯಂತ ಸುಂದರ ಮತ್ತು ಸೆಕ್ಸಿಯೆಸ್ಟ್ (Sexiest) ಉಡುಪು ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸೀರೆಯ ಮೇಲಿನ ತಮ್ಮ ವ್ಯಾಮೋಹವನ್ನು ಹಂಚಿಕೊಂಡಿರುವ ಶಾಮ್ನಾ, "ಸೀರೆ ಕೇವಲ ಸಾಂಪ್ರದಾಯಿಕ ಉಡುಪು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅದು ಹಾಗಲ್ಲ, ಹೆಣ್ಣಿಗೆ ಸೀರೆಯೇ ಅತ್ಯಂತ ಸುಂದರವಾದ ಮತ್ತು ಸೆಕ್ಸಿಯಾದ ಉಡುಗೆಯಾಗಿದೆ. ನನ್ನ ವಾರ್ಡ್‌ರೋಬ್ ತುಂಬಾ ಸೀರೆಗಳೇ ತುಂಬಿವೆ. ಇತ್ತೀಚಿನ ದಿನಗಳಲ್ಲಿ ನಾನು ಸೀರೆ ಉಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ, ಆದರೆ ತೂಕ ಇಳಿಸಿಕೊಂಡ ನಂತರ ಮತ್ತೆ ಸೀರೆಗಳತ್ತ ಮರಳಲು ಬಯಸುತ್ತೇನೆ. ನಾನು 18-19 ವರ್ಷದವಳಿದ್ದಾಗ ಪ್ರತಿಯೊಂದು ಕಾರ್ಯಕ್ರಮಕ್ಕೂ ಸೀರೆಯನ್ನೇ ಉಡುತ್ತಿದ್ದೆ. ಆಗ ನಮ್ಮ ತಾಯಿ 'ನೀನೇಕೆ ಯಾವಾಗಲೂ ಸೀರೆ ಉಡುತ್ತೀಯಾ?' ಎಂದು ಕೇಳುತ್ತಿದ್ದರು. ನನಗೆ ಸೀರೆ ಎಂದರೆ ಅಷ್ಟೊಂದು ಇಷ್ಟ" ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

Also Read
100 ರೂ.ಗೂ ಕಡಿಮೆ ಬೆಲೆಯ ಈ ತೆಂಗಿನಕಾಯಿ ಹರಾಜಾಗಿದ್ದು ಬರೋಬ್ಬರಿ 2.55 ಲಕ್ಷ ರೂ.ಗೆ! ಏಕಿಷ್ಟು ಡಿಮ್ಯಾಂಡ್​? ಇಲ್ಲಿದೆ ಅಚ್ಚರಿ ಕಾರಣ...Coconut Auction
Shamna Kasim

ತಮ್ಮ ವೃತ್ತಿಜೀವನದ ಆರಂಭದಿಂದಲೂ ವಿಶೇಷ ಹಾಡುಗಳಲ್ಲಿ (Special songs) ಕಾಣಿಸಿಕೊಂಡಿದ್ದರೂ, ವೇಷಭೂಷಣಗಳ ವಿಷಯದಲ್ಲಿ ತಾವು ಬಹಳಷ್ಟು ಎಚ್ಚರಿಕೆ ವಹಿಸುವುದಾಗಿ ಶಾಮ್ನಾ ತಿಳಿಸಿದ್ದಾರೆ. ಈ ಬಗ್ಗೆ ವಿವರಿಸಿದ ಅವರು, "ನಾನು ಯಾವುದೇ ಉಡುಪುಗಳನ್ನು ದೂಷಿಸುವುದಿಲ್ಲ. ಆದರೆ ಆ ಉಡುಪನ್ನು ಧರಿಸುವವರಿಗೆ ಅದಕ್ಕೆ ನ್ಯಾಯ ಒದಗಿಸುವಂತಹ ಮೈಕಟ್ಟು ಮತ್ತು ಸೌಂದರ್ಯವಿರಬೇಕು. 'ಕಾವಾಲಾ' (Kaavaalaa) ತರಹದ ಹಾಡುಗಳು ಬಂದರೆ ನಾನು ಖಂಡಿತವಾಗಿಯೂ ಡ್ಯಾನ್ಸ್ ಮಾಡಲು ಸಿದ್ಧಳಿದ್ದೇನೆ, ಆದರೆ ಆ ರೀತಿಯ ಉಡುಪು ನನಗೆ ಸ್ವಲ್ಪವೂ ಒಪ್ಪುವುದಿಲ್ಲವಾದ್ದರಿಂದ ನಾನು ಅಂತಹ ಕಾಸ್ಟ್ಯೂಮ್‌ಗಳನ್ನು ತಪ್ಪಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ‘ಜೈಲರ್ 2’ ಚಿತ್ರದ ಹಾಡಿನ ಕುರಿತು ನಿರ್ದೇಶಕರು ತಮ್ಮ ಬಳಿ ಮಾತನಾಡಿದಾಗ, ಶಾಮ್ನಾ ಮೊದಲು ಕೇಳಿದ್ದೇ ಉಡುಪಿನ ಬಗ್ಗೆಯಂತೆ! ಆದರೆ, ಆ ಹಾಡಿನಲ್ಲಿ ‘ಕುರ್ಚಿ ಮಡತಪೆಟ್ಟಿ’ (Kurchi Madathapetti) ಹಾಡಿನ ಮಾದರಿಯಲ್ಲಿ ಸೀರೆಯೇ ನಿಮ್ಮ ಉಡುಪಾಗಿರುತ್ತದೆ ಮತ್ತು ಅದು ನಿಮಗೆ ಅತ್ಯಂತ ಆರಾಮದಾಯಕವಾಗಿರುತ್ತದೆ ಎಂದು ನಿರ್ದೇಶಕರು ಭರವಸೆ ನೀಡಿದ್ದರು. ಕೇರಳದ ಹಿನ್ನೆಲೆಯಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದ್ದರಿಂದ ವಿಶೇಷವಾಗಿ ಬಿಳಿ ಬಣ್ಣದ ಸೀರೆಯನ್ನು ಆಯ್ಕೆ ಮಾಡಲಾಗಿತ್ತು ಎಂದು ಶಾಮ್ನಾ ಹೇಳಿಕೊಂಡಿದ್ದಾರೆ.

Also Read
ಸಂಸ್ಕೃತಿ ಬಗ್ಗೆ ಮಾತನಾಡುವವರು ಈ ವಿಚಾರದಲ್ಲೇಕೆ ಮೌನ? ವಿವಾದದ ಬಿರುಗಾಳಿ ಎಬ್ಬಿಸಿದ ನಟಿ ಪಾರ್ವತಿ ಮಾತುಗಳು..! Parvathy Thiruvoth
Shamna Kasim

‘ಜೈಲರ್ 2’ ಚಿತ್ರದ ಈ ಹಾಡಿನ ಚಿತ್ರೀಕರಣದ ಅನುಭವವನ್ನು ಮೆಲುಕು ಹಾಕಿರುವ ಶಾಮ್ನಾ ಕಾಸಿಂ, ಈ ಹಾಡನ್ನು ಸತತ ಆರು ದಿನಗಳ ಕಾಲ ಚಿತ್ರೀಕರಿಸಲಾಯಿತು ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಹಾಡಿಗೆ ಸಿಗುತ್ತಿರುವ ಭರ್ಜರಿ ಯಶಸ್ಸಿನ ಶ್ರೇಯಸ್ಸು ಕೇವಲ ತಮಗೆ ಮಾತ್ರವಲ್ಲದೆ, ತಮ್ಮೊಂದಿಗೆ ಹೆಜ್ಜೆ ಹಾಕಿದ ಸಹ ನೃತ್ಯಗಾರರ (Dancers) ಕಠಿಣ ಪರಿಶ್ರಮಕ್ಕೆ ಸಲ್ಲಬೇಕು ಎಂದು ಹೇಳುವ ಮೂಲಕ ತಮ್ಮ ಸಹಕಲಾವಿದರ ಶ್ರಮವನ್ನು ಮನಸಾರೆ ಶ್ಲಾಘಿಸಿದ್ದಾರೆ, (ಏಜೆನ್ಸೀಸ್​).