ನನ್ನ ಸಿಕ್ಸ್​​ ಪ್ಯಾಕ್.. ಮತ್ತೆ ಸಿಗೋಣ; ವಿಶೇಷ ರೀತಿಯಲ್ಲಿ ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸಮಂತಾ..Samantha Baby Bump

Samantha baby bump Instagram post
Samantha baby bump Instagram post
Published on

ಪ್ರಮುಖ ಮುಖ್ಯಾಂಶಗಳು

  • ಬೇಬಿ ಬಂಪ್‌ನ ತಾಜಾ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಸಮಂತಾ ರುತ್ ಪ್ರಭು.
  • ನನ್ನ ಸಿಕ್ಸ್-ಪ್ಯಾಕ್. ನಿಮ್ಮನ್ನು ಮತ್ತೆ ಭೇಟಿಯಾಗುವೆ ಎಂದು ಪೋಸ್ಟ್​ ಹಂಚಿಕೊಂಡ ಸಮಂತಾ
  • ಮಾ ಇಂಟಿ ಬಂಗಾರಂ ಚಿತ್ರದ ಯಶಸ್ಸಿನ ಬಳಿಕ ಮಾತೃತ್ವದ ರಜೆ ತೆಗೆದುಕೊಳ್ಳಿವ ಬಗ್ಗೆ ಮಾಹಿತಿ ಕೊಟ್ಟಿದ್ದ ಸಮಂತಾ

Samantha baby bump Instagram post: ಮಾ ಇಂಟಿ ಬಂಗಾರಂ ಸಕ್ಸಸ್​ ಮೀಟ್​ನಲ್ಲಿ ನಟಿ ಸಮಂತಾ ಅವರು ಸಾರಿ ನಾನು ಮತ್ತೊಂದು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೆರಿಗೆ ರಜೆ ಬಗ್ಗೆ ಪ್ರಸ್ತಾಪಿಸಿದ್ದರು. ಆ ಬೆನ್ನಲ್ಲೇ ಇನ್​​ಸ್ಟಾಗ್ರಾಮ್​ನಲ್ಲಿ ಕ್ಯೂಟ್​ ಆಗಿ ತಮ್ಮ ಬೇಬೆ ಬಂಪ್​ ಫೋಟೋವನ್ನು ಹಂಚಿಕೊಂಡಿದ್ದಾರೆ.

ನನ್ನ ಸಿಕ್ಸ್-ಪ್ಯಾಕ್

ಇದೇ ನನ್ನ ಸಿಕ್ಸ್-ಪ್ಯಾಕ್. ಮತ್ತೆ ಸಿಗೋಣ ಎಂದು ಅತ್ಯಂತ ತಮಾಷೆಯಾಗಿ ಬರೆದುಕೊಂಡು ಇನ್​​ಸ್ಟಾಗ್ರಾಮ್​ ಸ್ಟೋರಿಸ್​​ನಲ್ಲಿ ಅಪ್ಲೋಡ್​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿನಂದನೆಗಳು ಮತ್ತು ಹಾರ್ಟ್ ಎಮೋಜಿಗಳ ಮಹಾಪೂರವೇ ಹರಿದುಬರುತ್ತಿದೆ.
ನಟಿ ಸಮಂತಾ ಪೋಸ್ಟ್

ಸಕ್ಸಸ್​ ಮೀಟ್​ನಲ್ಲಿ ನಟಿ ಹೇಳಿದ್ದೇನು?
ಮಾ ಇಂಟಿ ಬಂಗಾರಂ ಸಿನಿಮಾಗೆ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದಿಂದ ಮತ್ತೆ ಬ್ರೇಕ್​ ತೆಗೆದುಕೊಳ್ಳಬೇಡಿ ಎಂದು ಪತ್ರಕರ್ತರೊಬ್ಬರು ಕೇಳಿಕೊಂಡರು ಈ ವೇಳೆ ಮಾತನಾಡಿದ ಅವರು, ಗಾಯ್ಸ್​ ಸಾರಿ ನಾನು ಸಿನಿಮಾದಿಂದ ಮತ್ತೊಂದು ಬ್ರೇಕ್​ ತೆಗೆದುಕೊಂಡು ಮರಳಿ ಬರುತ್ತೇನೆ. ಹೆಚ್ಚೆಚ್ಚು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತೇನೆ. ಸದ್ಯ ನಾನು ಹೆರಿಗೆ ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.
ನಿರ್ದೇಶಕಿ ನಂದಿನಿ ರೆಡ್ಡಿ ಅವರೊಂದಿಗೆ ಸಮಂತಾ ಅವರು ಕೆಲಸ ಮಾಡಿರುವ ಎರಡನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ ಅವರು ನಟಿಸಿದ್ದ ಓ ಮೈ ಬೇಬಿ ಸಾಕಷ್ಟು ಹಿಟ್​ ಕಂಡಿತ್ತು. ಸಮಂತಾ ಅವರು ಇಲ್ಲಿಯವರೆಗೂ ನಟಿಸಿರುವ ಸಿನಿಮಾಗಳಾದ ರಂಗಸ್ಥಳಂ, ಈಗ, ಸನ್​ ಆಫ್​ ಸತ್ಯಮೂರ್ತಿ ಸೇರಿದಂತೆ ನಾನಾ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್​ ಕಂಡಿವೆ. ಶುಭಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಅವರು ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದರು. ಆ ಮೂಲಕ ನಿರ್ಮಾಪಕಿಯಾಗಿ ಹೊರಹೊಮ್ಮಿದ್ದಾರೆ.

ಸಮಂತಾ ಮತ್ತು ರಾಜ್ ನಿಡಿಮೋರು ಮದುವೆ

ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರು ಡಿಸೆಂಬರ್ 1, 2025 ರಂದು ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ನಲ್ಲಿ ನಡೆದ ಆಪ್ತರ ಸಮ್ಮುಖದ ಸಮಾರಂಭದಲ್ಲಿ ವಿವಾಹವಾಗಿದ್ದರು. ಈ ದಂಪತಿಗಳು ಮೊದಲು ಪ್ರಸಿದ್ಧ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ 'ಸಿಟಾಡೆಲ್: ಹನಿ ಬನ್ನಿ' ಮತ್ತು ಈಗ 'ಮಾ ಇಂಟಿ ಬಂಗಾರಂ' ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಅವರು ನೆಟ್‌ಫ್ಲಿಕ್ಸ್‌ನ 'ರಕ್ತ್ ಬ್ರಹ್ಮಾಂಡ್' ಸರಣಿಗಾಗಿ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಈ ಸರಣಿಯನ್ನು ರಾಜ್ ಅವರು ತಮ್ಮ ಆಪ್ತ ಸಹಯೋಗಿ ಡಿಕೆ ಅವರೊಂದಿಗೆ ಜೊತೆಯಾಗಿ ಬರೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net