ದೃಶ್ಯಗಳು ಸೋರಿಕೆ ಬೆನ್ನಲ್ಲೇ ತಮಿಳು ಚಿತ್ರರಂಗದ ಅನೇಕ ಸ್ಟಾರ್ ನಟ, ನಟಿಯರು ಪೈರಸಿ ವಿರುದ್ಧ ಧ್ವನಿ ಎತ್ತಿದ್ದು, ಇಂತಹ ಕೆಲಸಗಳನ್ನು ಸಹಿಸಲು ಸಾಧ್ಯವಿಲ್ಲ. ನೂರಾರು ಕೆಲಸಗಾರರ ಶ್ರಮವನ್ನು ಎರಡು ಸೆಕೆಂಡ್ನಲ್ಲಿ ಛಿದ್ರಗೊಳಿಸುವವರ ನಡೆಗೆ ನಮ್ಮ ಛೀಮಾರಿ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿರುವ 'ಜನ ನಾಯಗನ್' ನಾಯಕಿ ಪೂಜಾ ಹೆಗ್ಡೆ, ಸಂಖ್ಯೆಯ ಕುರಿತಾಗಿ ನನಗೆ ಬೇಸರವಿಲ್ಲ. ಆದರೆ, ಚಿತ್ರದಲ್ಲಿ ಕೆಲಸ ಮಾಡಿರುವ ಕಲಾವಿದರು, ಟೆಕ್ನಿಷಿಯನ್ಗಳು ಮತ್ತು ತೆರೆ ಹಿಂದಿನ ಕಾಣದ ಕೈಗಳ ಗೌರವವನ್ನು ಕಿತ್ತುಕೊಂಡಿದ್ದಕ್ಕೆ ಎಂದು ಹೇಳಿದ್ದಾರೆ.