ತಿಮ್ಮಪ್ಪನ ಸನ್ನಿಧಿಗೆ ಬಂದ ನಯನತಾರಾ ದಂಪತಿ; LIK ಸಿನಿಮಾ ರಿಲೀಸ್​ಗೂ ಮುನ್ನ ಟೆಂಪಲ್​​ ರನ್..Nayanatara​

LIK Cinema
LIK Cinema
Published on

ಪ್ರಮುಖ ಮುಖ್ಯಾಂಶಗಳು

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಯನತಾರಾ, ಶಿವ ವಿಘ್ನೇಶನ್​
  • ಎಲ್​​ಐಕೆ ಸಿನಿಮಾ ರಿಲೀಸ್​ಗೂ ಮುನ್ನ ಟೆಂಪಲ್​ ರನ್​​
  • ಏ.10ರಂದು ರಿಲೀಸ್​ ಆಗಲಿರುವ ಲವ್​ ಇನ್ಶುರೆನ್ಸ್​ ಕಂಪನಿ ಸಿನಿಮಾ
LIK Cinema: ವಿಘ್ನೇಶ್​ ಶಿವನ್​ ನಿರ್ದೇಶನದ ಪ್ರದೀಪ್​ ರಂಗನಾಥನ್​​ ಅಭಿನಯದ Love Insurance Kompany (LIK) ಸಿನಿಮಾ ದೇಶದಾದ್ಯಂತ ರಿಲೀಸ್​ ಆಗಲೂ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅದಕ್ಕೂ ಮುನ್ನವೇ ನಯನತಾರ ಮತ್ತು ವಿಘ್ನೇಶ್​ ಶಿವನ್ ಟೆಂಪಲ್​ ರನ್​ ನಡೆಸಿರುವ ವಿಡಿಯೋಗಳು ಎಕ್ಸ್​ನಲ್ಲಿ ಹರಿದಾಡುತ್ತಿದೆ.
ಹೌದು ನಟಿ ನಯನತಾರ ಮತ್ತು ಚಲನಚಿತ್ರ ನಿರ್ಮಾಪಕ ವಿಘ್ನೇಶನ್​ ಅವರು ಆಂಧ್ರದ ಪ್ರಸಿದ್ಧ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಮಧ್ಯೆ ಅವರು ಧರಿಸಿದ್ದ ಸಾಂಪ್ರಾದಾಯಿಕ ಉಡುಗೆ ಫ್ಯಾನ್ಸ್​ನ ಗಮನ ಸೆಳೆಯಿತು.
ಗಮನ ಸೆಳೆದ ಡ್ರೆಸ್ಸಿಂಗ್​ ಸೆನ್ಸ್​
ತಿರುಪತಿ ದರ್ಶನ ಪಡೆಯಲು ನಯನತಾರಾ ದಂಪತಿ ಸಾಲಿನಲ್ಲಿ ನಿಂತಿದ್ದಾರೆ, ವಿಘ್ನೇಶ್​ ಶಿವನ್​ ಅವರು ಕೇಸರಿಯ ರೇಷ್ಮೆ ಜುಬ್ಬಾ ಧರಿಸಿದ್ದರೆ, ನಯನತಾರಾ ಅವರು ಬಿಳಿ ಕುರ್ತಾಗೆ ಹಸಿರು ದುಪ್ಪಟ್ಟ ಧರಿಸಿ ಗಮನ ಸೆಳೆದರು. ದೇವಸ್ಥಾನದ ಒಳಗೆ ಪ್ರವೇಶಿಸುವಾಗ ತಮ್ಮ ಅಭಿಮಾನಿ ದೇವರುಗಳಿಗೆ ಕೈ ಮುಗಿದು ನಮಸ್ಕರಿಸಿರುವದು ಮತ್ತಷ್ಟು ಅವರನ್ನು ಮೆಚ್ಚಿಕೊಳ್ಳುವಂತೆ ಮಾಡಿದೆ.

ಎಲ್​ಐಕೆ ಸಿನಿಮಾ ಏನಿದರ ವಿಶೇಷತೆ?

ಏಪ್ರಿಲ್​ 10ರಂದು ರಿಲೀಸ್​ಗೆ ಸಜ್ಜಾಗಿರುವ ಸಿನಿಮಾ ಒಂದು ವೈಜ್ಞಾನಿಕ ಕಾಲ್ಪನಿಕ ಪ್ರಣಯ ಮನರಂಜನಾ ಕತೆಯ ಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದರೆ, ಪ್ರದೀಪ್​ ರಂಗನಾಥನ್​ ಹಿರೋ ಆಗಿ ಮಿಂಚಲು ಮುಂದಾಗಿದ್ದಾರೆ. ಇನ್ನು ಎಸ್​ಜೆ ಸೂರ್ಯ, ಗೌರಿ ಕಿಶನ್​, ಯೋಗಿ ಬಾಬು, ಸೀಮನ್,ಮಾಳವಿಕಾ ಬಣ್ಣ ಹಚ್ಚಿದ್ದಾರೆ.
2040ರ ಹೊತ್ತಿಗೆ ವಿಮಾ ಕಂಪನಿಗಳು ಪ್ರೀತಿಗಾಗಿಯೂ ಒಂದು ಇನ್ಶುರೆನ್ಸ್​ ತೆರೆಯಲಾಗುತ್ತದೆ. ಹಳೆಯ ಶೈಲಿಯ ಪ್ರೀತಿಯ ನಂಬಿ ಲವ್​ ಅಪ್ಲಿಕೇಶನ್​ ವಿರುದ್ಧ ಹೋರಾಡುವ ಕತೆ ಇದಾಗಿದೆ. ಮೊದಲು ಈ ಸಿನಿಮಾ ಟೈಟಲ್LIC ಎಂದು ಇರಿಸಲಾಗಿತ್ತು. ಆದರೆ ಇದು ಲೈಫ್​ ಇನ್ಶುರೆನ್ಸ್​ ಕಾರ್ಪೋರೇಶನ್​ ಎಂದು ಬಿಂಬಿಸುತ್ತದೆ ಎಂದು ನೋಟಿಸ್​ ಜಾರಿ ಮಾಡಲಾಗಿತ್ತು. ನಂತರ ಚಿತ್ರತಂಡವು LIK ಎಂದು ಸಿನಿಮಾದ ಹೆಸರನ್ನು ಬದಲಿಸಿತು.

ಮೇಯಲ್ಲಿ ಓಟಿಟಿನಲ್ಲಿ ಸಿನಿಮಾ ರಿಲೀಸ್​?

ಇದರ ಡಿಜಿಟಲ್​ ಸ್ಟ್ರೀಮಿಂಗ್​ ಹಕ್ಕನ್ನು ಅಮೆಜಾನ್​ ಪ್ರೈಮ್ ಪಡೆದುಕೊಂಡಿದೆ. ಮೇಯಲ್ಲಿ ಓಟಿಟಿಗೆ ಬರುವ ಸಾಧ್ಯತೆ ಇದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net