2.5 ಕೋಟಿ ರೂ. ಕಟ್ಟಿ! ಇಲ್ಲವೇ ಜೈಲಿಗೆ ಹೋಗಿ... ರಜಿನಿ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್​ ಶಾಕ್​ | Rajinikanth

ರಜಿನಿ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್​ ತಪರಾಕಿ
ರಜಿನಿ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್​ ತಪರಾಕಿ
Published on

ಪ್ರಮುಖ ಮುಖ್ಯಾಂಶಗಳು

  • ರಜಿನಿಕಾಂತ್ ನಟಿಸಿದ 10 ವರ್ಷಗಳ ಹಿಂದಿನ ಚಿತ್ರ 'ಕೊಚಡೈಯನ್'
  • ಈ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್​ ಸೂಚನೆ
  • 2.5 ಕೋಟಿ ರೂ. ಕಟ್ಟಿ, ಇಲ್ಲವೇ ಜೈಲಿಗೆ ಹೋಗಿ ಎಂದ ನ್ಯಾಯಾಲಯದ ಆದೇಶ
ಚೆನ್ನೈ: ಹತ್ತು ವರ್ಷಗಳ ಹಿಂದೆ ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ನಾಯಕನಾಗಿ ಮತ್ತು ಅವರ ಪುತ್ರಿ ಸೌಂದರ್ಯ ನಿರ್ದೇಶನದ 'ಕೊಚಡೈಯನ್' (ತೆಲುಗಿನಲ್ಲಿ 'ವಿಕ್ರಮಸಿಂಹ') ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಆದರೆ, ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಈ ಚಿತ್ರದ ನಿರ್ಮಾಪಕ (Film Producer) ಮುರಳಿ ಮನೋಹರ್‌ಗೆ ದೊಡ್ಡ ಶಾಕ್​ ನೀಡಿದೆ.

ನಾಲ್ಕು ವಾರಗಳಲ್ಲಿ...

ಹಳೆಯ ಬಾಕಿಗಳಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ 'ಆ್ಯಡ್​ ಬ್ಯೂರೋ' ಕಂಪನಿಗೆ 2.5 ಕೋಟಿ ರೂ. ಪಾವತಿಸಲು ಆದೇಶಿಸಿದೆ. ಈ ಹಣವನ್ನು ಈಗಾಗಲೇ ತಿಳಿಸಿರುವ ಸಮಯದೊಳಗೆ ಪಾವತಿಸಬೇಕು. ಇಲ್ಲದೇ ಹೋದಲ್ಲಿ, ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆಯೇ ವಿಚಾರಣಾ ನ್ಯಾಯಾಲಯವು ಮುರುಳಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ ನಿರ್ಮಾಪಕರು, ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಇಲ್ಲಿಯೂ ಅವರಿಗೆ ಭಾರೀ ಮುಖಭಂಗವೇ ಉಂಟಾಗಿದೆ.

ಅಷ್ಟಕ್ಕೂ ಏನಿದು ವಿವಾದ?

ಈ ವಿವಾದ 2014ರಲ್ಲಿ ಆರಂಭವಾದ್ದದ್ದು. ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನ ಪ್ರತಿನಿಧಿ ಮುರಳಿ ಮನೋಹರ್, ತಮ್ಮ 'ಕೊಚಡೈಯನ್' ಚಿತ್ರದ ಕೆಲಸಕ್ಕಾಗಿ ಬೆಂಗಳೂರು ಮೂಲದ ಜಾಹೀರಾತು ಬ್ಯೂರೋ ಕಂಪನಿಯಿಂದ ಲೋನ್​ ಪಡೆದಿದ್ದರು. ಆದರೆ, ಮರುಪಾವತಿಯ ಭಾಗವಾಗಿ ಅವರು ನೀಡಿದ 5 ಕೋಟಿ ರೂ. ಚೆಕ್ ಬೌನ್ಸ್ ಆದ ಕಾರಣ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿತು.
ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದೇ ತಡ ವಿವಾದ ಅಂತಿಮ ಘಟ್ಟ ತಲುಪಿದೆ. ನಿರ್ಮಾಪಕ ಮುರುಳಿ ಈಗ ಕೋರ್ಟ್​ ಆದೇಶದಂತೆ 2.5 ಕೋಟಿ ರೂ. ಕಟ್ಟಬೇಕಿದೆ. ಇಲ್ಲದಿದ್ರೆ, ಜೈಲು ಶಿಕ್ಷೆಗೆ ಗುರಿಯಾಗಬೇಕಿದೆ. ರಜಿನಿಕಾಂತ್ ಅಭಿನಯದ 'ಕೊಚಡೈಯನ್', ಭಾರಿ ಬಜೆಟ್ ಮತ್ತು 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ರಿಲೀಸ್​ ಆದ ಚಿತ್ರ. ಆದರೆ, ಆ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಚಿತ್ರತಂಡ ನಿರೀಕ್ಷಿಸಿದ ಯಶಸ್ಸನ್ನು ಸಿನಿಮಾ ಗಳಿಸಲಿಲ್ಲ. ಈಗ, 10 ವರ್ಷಗಳ ಬಳಿಕ, ಈ ಚಿತ್ರವು ಹಣಕಾಸಿನ ವಿವಾದದಿಂದ ಮತ್ತೊಮ್ಮೆ ಸುದ್ದಿಗೆ ಬಂದಿರುವುದು ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net