ಇದರಿಂದ ಕೂಲಿ 1000 ಕೋಟಿ ರೂ. ಕ್ಲಬ್ ಸೇರಲು ವಿಫಲವಾಯಿತು. ಇದರೊಟ್ಟಿಗೆ, ಸ್ಟಾರ್ ಹೀರೋಗಳಾದ ಕಮಲ್ ಹಾಸನ್, ಸೂರ್ಯ ಮತ್ತು ಅಜಿತ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದು ಕಾಲಿವುಡ್ ಹಾಕಿಕೊಂಡಿದ್ದ ಗುರಿಯನ್ನು ಮುಟ್ಟಲು ಉತ್ತಮ ಸಾಥ್ ನೀಡಲಿಲ್ಲ. ಅಲ್ಲದೆ, ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರದ ಮೇಲಿದ್ದ ದುಪ್ಪಟ್ಟು ಭರವಸೆ, ನಿರೀಕ್ಷೆಗಳಿಗೂ ಬ್ರೇಕ್ ಬಿದ್ದಿದೆ.