ಅಂದಹಾಗೆ, ಇತ್ತೀಚೆಗೆ ರಜಿನಿಕಾಂತ್-ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಘೋಷಣೆಯಾಗಿತ್ತು. ಖುಷ್ಬೂ ಅವರ ಪತಿ ಮತ್ತು ನಿರ್ದೇಶಕ ಸುಂದರ್ ಸಿ ಈ ಬಹುತಾರಾಗಣ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಎರಡೇ ದಿನಗಳಲ್ಲಿ ಚಿತ್ರವನ್ನು ನಿರ್ದೇಶಿಸುವುದಿಲ್ಲ ಎಂದು ಸುಂದರ್ ಪತ್ರಿಕಾ ಪ್ರಕಟನೆ ಹೊರಡಿಸಿದರು. ಅನಿವಾರ್ಯ ಕಾರಣಗಳಿಂದ ಹೊರಬರುತ್ತಿದ್ದೇನೆ ಎಂದು ಸುಂದರ್ ಅವರು ಸ್ಪಷ್ಟನೆ ನೀಡಿದರು. ಇದರ ನಡುವೆ ಸುಂದರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಖುಷ್ಬೂ ಅವರಿಗೆ ಐಟಂ ಸಾಂಗ್ ಮಾಡಲು ಬೇಡಿಕೆ ಇಡಲಾಗಿದೆ, ಅದಕ್ಕಾಗಿಯೇ ಅವರ ಪತಿ ಚಿತ್ರದಿಂದ ಹೊರಬಂದಿದ್ದಾರೆ ಎಂದು ಟ್ರೋಲ್ ಮಾಡಲಾಯಿತು.