ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ತ್ರಿಷಾ, ಇತ್ತೀಚೆಗೆ ಊಹಾಪೋಹಗಳು ಖಂಡಿತ ನಿಜ ಎಂದು ಹೇಳುವುದಕ್ಕೆ ಹೊಸ ಪೋಸ್ಟ್ವೊಂದನ್ನು ಹಂಚಿಕೊಂಡರು. ಪ್ರೀತಿಯೇ ಎಲ್ಲ ಅಲ್ಲದಿದ್ದರೂ, ಅದಿಲ್ಲದೆ ಜೀವನ ಶೂನ್ಯ ಎಂಬ ಅವರ ಪೋಸ್ಟ್ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ. ಪ್ರಸ್ತುತ, ವಿಜಯ್ ದಾಂಪತ್ಯ ಜೀವನ ಮುರಿದುಬಿದ್ದಿದ್ದು, ತಮಿಳುನಾಡು ಚುನಾವಣೆಯಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ, ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದು, ಇದು ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).