ತಿರುಗಿ ನೋಡುವ ಮಾತೇ ಇಲ್ಲ! ಮಾಸ್​ಗೆ ಕಿಚ್ಚು ಹಚ್ಚಿದ ದಳಪತಿ; ವಿಜಯ್​ ಕೊನೆಯ ಸಿನಿಮಾದ ಟ್ರೇಲರ್​ ಔಟ್​ | Jana Nayagan

ಜನನಾಯಗನ್​ ಚಿತ್ರದಲ್ಲಿ ನಟ ವಿಜಯ್​
ಜನನಾಯಗನ್​ ಚಿತ್ರದಲ್ಲಿ ನಟ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'​
  • ಕೊನೆಯ ಸಿನಿಮಾದ ಟ್ರೇಲರ್​ ಔಟ್​, ಫ್ಯಾನ್ಸ್ ಭಾವುಕ
  • ಆ್ಯಕ್ಷನ್​, ಮಾಸ್​ ಪ್ಯಾಕ್ಡ್​ ಚಿತ್ರದ ಟ್ರೇಲರ್​ನ ಒಂದೊಂದು ದೃಶ್ಯವು...
ತಮಿಳುನಾಡು: ತಮಿಳಿನ ಸ್ಟಾರ್​ ನಟ, 'ಟಿವಿಕೆ' (ತಮಿಳಗ ವೆಟ್ರಿ ಕಳಗಮ್​​) ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'​ ಟ್ರೇಲರ್​ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಆ್ಯಕ್ಷನ್​, ಮಾಸ್​ ಪ್ಯಾಕ್ಡ್​ ಚಿತ್ರದ ಟ್ರೇಲರ್​ನ ಒಂದೊಂದು ದೃಶ್ಯವು ನಟನ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದ್ದು, ಕಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.
ಇತ್ತೀಚೆಗಷ್ಟೇ 'ಜನನಾಯಗನ್'​ ಆಡಿಯೋ ಲಾಂಚ್​ ಅದ್ಧೂರಿಯಾಗಿ ಮಲೇಷ್ಯಾದ ಬುಕಿತ್ ಜೈಲ್​ ಸ್ಟೇಡಿಯಂನಲ್ಲಿ ನಡೆಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ವಿಜಯ್ ಕೈಬಿಸಿ, ಧನ್ಯವಾದ ಅರ್ಪಿಸಿ, ಚಿತ್ರರಂಗಕ್ಕೆ ವಿದಾಯ ಹೇಳಿದ್ದು ನಟನ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿತು. ಆದರೆ, ತಮ್ಮ ಕೊನೆಯ ಸಿನಿಮಾ ಮೂಲಕ ಮನರಂಜನೆಯನ್ನು ಜಬರ್ದಸ್ತ್​ ಆಗಿ ನೀಡುವ ಭರವಸೆಯನ್ನು ನೀಡಿದ್ದ ವಿಜಯ್​, ಟ್ರೇಲರ್​ ಮೂಲಕ ಮೊದಲ ಹಂತದಲ್ಲಿ ಈಡೇರಿಸಿದ್ದಾರೆ ಎಂಬುದಂತು ಸ್ಪಷ್ಟ.

ಒನ್​ ಲಾಸ್ಟ್​ ಫಿಲಂ, ಟ್ರೇಲರ್​...

ಮಾಸ್​ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಟ್ರೇಲರ್​, ಹಲವು ರೋಚಕ ಹಾಗೂ ಕುತೂಹಲ ಕೆರಳಿಸುವ ವಿಷಯಗಳನ್ನೇ ಒಳಗೊಂಡಿದೆ. ದಳಪತಿ ಹೆಸರಿನಿಂದಲೇ ಶುರುವಾಗುವ ವಿಜಯ್​ ಎಂಟ್ರಿ, ಡೈಲಾಗ್​, ಆ್ಯಕ್ಷನ್​ ದೃಶ್ಯಗಳು ಥ್ರಿಲ್ ನೀಡಿದರೆ, ಸಂಬಂಧ ಮತ್ತು ಭಾವನೆಗಳು ಕಥೆಯ ಮತ್ತೊಂದು ಆಯಾಮವನ್ನು ಹೇಳುತ್ತಿವೆ. ಟ್ರೇಲರ್​ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ವಿಜಯ್​ ಅಭಿಮಾನಿಗಳ ಖುಷಿ-ಬೇಸರಕ್ಕೆ ಕಾರಣವಾಗಿದೆ.
ಬಹುನಿರೀಕ್ಷಿತ ಚಿತ್ರದಲ್ಲಿ ವಿಜಯ್​, ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಮತಾ ಬಿಜ್ಜು, ಬೇಬಿ ಡಿಯೋಲ್​, ಮೋನಿಷಾ ಬ್ಲೆಸ್ಸಿ, ಪ್ರಕಾಶ್​ ರಾಜ್​, ಪ್ರಿಯಾಮಣಿ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್​ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ. ದಳಪತಿ ವಿಜಯ್​ ಅವರ ಹಿಂದಿನ ಸಿನಿಮಾಗಳಿಗೂ ಸಂಗೀತ ನೀಡಿದ್ದ ಅನಿರುದ್ಧ್​ ಅವರೇ 'ಜನನಾಯಗನ್'​ಗೂ ನೀಡಿರುವುದು ಫ್ಯಾನ್ಸ್​ಗಳ ಫೇವರೇಟ್​ ಆಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net