'ಜನ ನಾಯಗನ್' ಆಯ್ತು ಈಗ... ಕಡಿಮೆ ಬಜೆಟ್​ನಲ್ಲಿ ಸೂಪರ್​ಹಿಟ್ ಸಿನಿಮಾ​ ಕೊಡುತ್ತಿದ್ದ ಹೀರೋಗೆ ಇದೆಂಥಾ ಗೋಳು | LIK

ಪ್ರದೀಪ್ ರಂಗನಾಥನ್ ನಟಿಸಿದ ಎಲ್​ಐಕೆ ಚಿತ್ರಕ್ಕೂ ಪೈರಸಿ ಕಾಟ
ಪ್ರದೀಪ್ ರಂಗನಾಥನ್ ನಟಿಸಿದ ಎಲ್​ಐಕೆ ಚಿತ್ರಕ್ಕೂ ಪೈರಸಿ ಕಾಟ
Published on

ಪ್ರಮುಖ ಮುಖ್ಯಾಂಶಗಳು

  • ಜನ ನಾಯಗನ್ ಚಿತ್ರಕ್ಕೆ ಬಂದ ಗತಿಯೇ ಪ್ರದೀಪ್​ ಸಿನಿಮಾಗೆ
  • ರಿಲೀಸ್​ ಆಗಿ ಎರಡೇ ದಿನಕ್ಕೆ ಚಿತ್ರಕ್ಕೆ ಪೈರಸಿ ಕಾಟ
ಚೆನ್ನೈ: 'ಕೋಮಾಲಿ' ಚಿತ್ರದ ಮೂಲಕ ನಿರ್ದೇಶಕರಾಗಿ ಮತ್ತು 'ಲವ್ ಟುಡೇ' ಚಿತ್ರದ ನಾಯಕನಾಗಿ 100 ಕೋಟಿ ಕ್ಲಬ್‌ಗೆ ಎಂಟ್ರಿಕೊಟ್ಟ ತಮಿಳಿನ ಯೂತ್​ ಐಕನ್​, ಯುವ ನಟ ಪ್ರದೀಪ್ ರಂಗನಾಥನ್, ಅಭಿನಯಿಸಿದ ಕೇವಲ ಮೂರ್ನಾಲ್ಕು ಚಿತ್ರಗಳಿಂದಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿದ 'ಎಲ್​ಐಕೆ' ಚಿತ್ರ ಬಿಡುಗಡೆಗೊಂಡಿದ್ದು, ಚಿತ್ರದ ಕೆಲವು ದೃಶ್ಯಗಳು ಜಾಲತಾಣಗಳಲ್ಲಿ ಸೋರಿಕೆ ಆಗಿವೆ. 
'ಲವ್​ ಟುಡೇ', 'ಡ್ರ್ಯಾಗನ್'​ ಚಿತ್ರಗಳಿಂದ ಸಿನಿಪ್ರಿಯರ ಗಮನ ಸೆಳೆದಿರುವ ಪ್ರದೀಪ್, 'ಡ್ಯೂಡ್'​ ಸಿನಿಮಾದಲ್ಲಿ ಅಂತಹ ಯಶಸ್ಸು ನೋಡಲಿಲ್ಲ. ಆದರೀಗ, ನಟನ ನಾಲ್ಕನೇ ಬಹುನಿರೀಕ್ಷಿತ 'ಲವ್ ಇನ್ಶುರೆನ್ಸ್ ಕಂಪನಿ' (LIK) ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ಮತ್ತು ವಿಮರ್ಶೆಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಇದು ಶೀಘ್ರವೇ ಚಿತ್ರವು ಫ್ಲಾಪ್ ಸಾಲಿಗೆ ಸೇರುವ ಮುನ್ಸೂಚನೆಯನ್ನು ನೀಡಿದೆ. 
ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ಲೇಡಿ ಸೂಪರ್‌ಸ್ಟಾರ್ ನಯನತಾರಾ ನಿರ್ಮಾಣದ ಈ ಸಿನಿಮಾ, ಭಾರಿ ನಿರೀಕ್ಷೆಗಳ ಮಧ್ಯೆ ಬಿಡುಗಡೆಯಾಗಿ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸೋಲುವ ಭೀತಿಯಲ್ಲಿದೆ. ಮತ್ತೊಂದೆಡೆ, ವಿಜಯ್ ಚಿತ್ರಕ್ಕೆ ಬಂದ ಗತಿಯೇ ಪ್ರದೀಪ್​ ಚಿತ್ರಕ್ಕೂ ಬಂದಿರುವುದು ಚಿತ್ರತಂಡಕ್ಕೆ ಭಾರೀ ಬೇಸರ ತಂದೊಡ್ಡಿದೆ.  
ಇತ್ತೀಚೆಗಷ್ಟೇ ದಳಪತಿ ವಿಜಯ್ ಅವರ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರದ ಬಹುಮುಖ್ಯ ಸೀನ್​ಗಳನ್ನು ಕಿಡಿಗೇಡಿಗಳು ಆನ್​ಲೈನ್​ನಲ್ಲಿ ಹರಿಬಿಟ್ಟರು. ಪೈರಸಿ ಕಾಟಕ್ಕೆ ಬೇಸತ್ತ ಚಿತ್ರತಂಡ, ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿತು. ಇದಕ್ಕೆ ತಮಿಳು ಚಿತ್ರರಂಗದ ಕಲಾವಿದರು ದನಿಗೂಡಿಸಿದರು. ಆದರೀಗ, ಅದೇ ಸ್ಥಿತಿ ಪ್ರದೀಪ್​ ಸಿನಿಮಾಗೂ ಕಾಡಿದೆ. ಥಿಯೇಟರ್​ಗೆ ಬಂದು ಒಂದೆರೆಡು ದಿನಗಳೂ ಸರಿಯಾಗಿ ಆಗಿಲ್ಲ. ಅಷ್ಟು ಬೇಗ, ಎಲ್​ಐಕೆ ಸಿನಿಮಾ ಹಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವುದು ಸದ್ಯ ಕಾಲಿವುಡ್​ಗೆ ತೀರ ಕಳವಳಕಾರಿಯಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net