ಜನ ನಾಯಗನ್ ಸೋರಿಕೆಯ ಪ್ರಮುಖ ಆರೋಪಿ ಓರ್ವ ಫ್ರೀಲ್ಯಾನ್ಸ್ (ಪಾರ್ಟ್ಟೈಮ್) ಸಿನಿಮಾ ಎಡಿಟರ್ ಎನ್ನಲಾಗಿದೆ. ಒಂದಷ್ಟು ಚಿತ್ರಗಳಲ್ಲಿ ಸಹಾಯಕ ಸಂಪಾದಕನಾಗಿಯೂ ಕೆಲಸ ಮಾಡಿರುವ ಈತ, ಕೇವಲ ಸಿನಿಮಾ ಟೆಕ್ನಿಷಿಯನ್ಗಳಿರುವ ರೂಮ್ನಲ್ಲಿ ಚಿತ್ರದ ಫೂಟೇಜ್ ಹೊತ್ತೊಯ್ದ ಬಗ್ಗೆ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ. ಎಡಿಟಿಂಗ್ ವೇಳೆ ಸ್ಟುಡಿಯೋದಲ್ಲಿದ್ದ ಆರೋಪಿ, ಬಹುಮುಖ್ಯ ದೃಶ್ಯಗಳನ್ನು ಪೂರ್ತಿಯಾಗಿ ವೀಕ್ಷಿಸಿದ್ದ. ಎಲ್ಲರ ಸಮ್ಮುಖದಲ್ಲೇ, ಚಿತ್ರದ ದೃಶ್ಯಗಳನ್ನು ಸ್ಟುಡಿಯೋದಿಂದ ಕದ್ದ ಬೆನ್ನಲ್ಲೇ, ಅದನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾಗಿ ಪೊಲೀಸರ ಬಳಿ ಹೇಳಿದ್ದಾನೆ ಎಂದು ವರದಿಯಾಗಿದೆ.