ಅಂದಹಾಗೆ, ಅಬ್ಬಾಸ್ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಲು ಮುಖ್ಯ ಕಾರಣವೆಂದರೆ, ಅವರು ನಾಯಕ ನಟನಾಗಿ ನಟಿಸಿದ ಕೆಲವು ಚಿತ್ರಗಳು ಸತತವಾಗಿ ಸೋಲನ್ನು ಅನುಭವಿಸಿದವು. ಇದರಿಂದಾಗಿ ದೊಡ್ಡ ಬ್ಯಾನರ್‌ನ ಸಿನಿಮಾಗಳು ಅವರನ್ನು ಕಡೆಗಣಿಸಲು ಶುರುಮಾಡಿದವು. ನಂತರ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಅಂದುಕೊಂಡ ಮಟ್ಟದ ಯಶಸ್ಸು ಸಿಗಲಿಲ್ಲ. ಸಿನಿಮಾ ರಂಗದಲ್ಲಿನ ಅನಿಶ್ಚಿತತೆ ಮತ್ತು ಆರ್ಥಿಕ ಭದ್ರತೆಯ ಕೊರತೆಯಿಂದಾಗಿ ಅವರು ಮಾನಸಿಕವಾಗಿ ಜಿಗುಪ್ಸೆ ಅನುಭವಿಸಿದ್ದರು. ಅಂತಿಮವಾಗಿ, ಕುಟುಂಬದ ಭವಿಷ್ಯಕ್ಕಾಗಿ ಚಿತ್ರರಂಗದಿಂದ ದೂರ ಸರಿದು ನ್ಯೂಜಿಲೆಂಡ್‌ನಲ್ಲಿ ನೆಲೆಸಿದರು.