ಡಿ-55ನಲ್ಲಿ ಶ್ರೀಲೀಲಾ- ಸಾಯಿಪಲ್ಲವಿ ಜುಗಲ್‌ಬಂಧಿ: ಧನುಷ್ ಜತೆ ಹೆಜ್ಜೆ ಹಾಲಿದ್ದಾರೆ ಇಬ್ಬರು ಸ್ಟಾರ್ ನಟಿಯರು

ಸಾಯಿ ಪಲ್ಲವಿ, ಶ್ರೀಲೀಲಾ
ಸಾಯಿ ಪಲ್ಲವಿ, ಶ್ರೀಲೀಲಾ
Published on

ಪ್ರಮುಖ ಮುಖ್ಯಾಂಶಗಳು

  • ಧನುಷ್ 55ನೇ ಚಿತ್ರಕ್ಕೆ ರಾಜ್ ಕುಮಾರ್ ಪೆರಿಯಸಾಮಿ ಆ್ಯಕ್ಷನ್​-ಕಟ್
  • ಮಾರಿ 2 ಬಳಿಕ ಮತ್ತೆ ಒಂದಾದ ಧನುಷ್​-ಸಾಯಿ ಪಲ್ಲವಿ
  • ಧನುಷ್ ಚಿತ್ರದ ಮೂಲಕ ಕಾಲಿವುಡ್ ನಲ್ಲಿ ಎರಡನೇ ಚಿತ್ರಕ್ಕೆ ಸಹಿ ಮಾಡಿದ ಶ್ರೀಲೀಲಾ
ತಮಿಳಿನ ‘ಅಮರನ್’ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ಮತ್ತು ನಟ ಧನುಷ್ ಕಾಂಬಿನೇಷನ್‌ನಲ್ಲಿ ಇತ್ತೀಚೆಗೆ ಹೊಸ ಸಿನಿಮಾ ಘೋಷಣೆಯಾಗಿತ್ತು. ಇದು ಧನುಷ್ ಅಭಿನಯದ 55ನೇ ಚಿತ್ರ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿರುವ ತಂಡ, ಇನ್ನೇನು ಶೂಟಿಂಗ್ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗ ಇತ್ತೀಚೆಗೆ ಚಿತ್ರತಂಡ ನಾಯಕಿಯ ಹುಡುಕಾಟಕ್ಕೆ ಮುಂದಾಗಿತ್ತು. ಅಂತಿಮವಾಗಿ ನಾಯಕಿಯನ್ನು ಹುಡುಕಿದ್ದಾರೆ. ಧನುಷ್ 55ನೇ ಚಿತ್ರದಲ್ಲಿ ಒಬ್ಬರಲ್ಲ, ದಕ್ಷಿಣ ಭಾರತ ಇಬ್ಬರು ಖ್ಯಾತ ನಟಿಯರು ಅಭಿನಯಿಸುತ್ತಿದ್ದಾರೆ. ನಟಿ ಶ್ರೀಲೀಲಾ ಮತ್ತು ಸಾಯಿ ಪಲ್ಲವಿಯನ್ನು ಚಿತ್ರತಂಡ ಸ್ವಾಗತಿಸಿದೆ. ಈ ಮೂಲಕ ಇಬ್ಬರು ದಕ್ಷಿಣ ನಟಿಯರ ನಡುವೆ ಒಂದೇ ಸಿನಿಮಾದಲ್ಲಿ ಜುಗಲ್‌ಬಂಧಿ ನಡೆಯಲಿದೆ. ಈಗಾಗಲೇ ‘ಪರಾಶಕ್ತಿ’ ಮೂಲಕ ತಮಿಳಿಗೆ ಡೆಬ್ಯೂ ಮಾಡಿ ಕಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ಶ್ರೀಲೀಲಾ, ಧನುಷ್ ನಟನೆಯ ಸಿನಿಮಾ ಮೂಲಕ ಮತ್ತೊಮ್ಮೆ ಕಾಲಿವುಡ್‌ನಲ್ಲಿ ಮೋಡಿ ಮಾಡಲು ಮುಂದಾಗುತ್ತಿದ್ದಾರೆ. ಇದು ಅವರಿಗೆ ತಮಿಳಿನ ಎರಡನೇ ತಮಿಳು ಸಿನಿಮಾ. ಇನ್ನು ಚಿತ್ರದಲ್ಲಿ ಮಲಯಾಳಂ ನಟ ಮಮ್ಮೂಟ್ಟಿ ಕೂಡ ನಟಿಸಲಿದ್ದಾರೆ ಎನ್ನಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಘೋಷಿಸಬೇಕಿದೆ. ಇನ್ನು ಶ್ರೀಲೀಲಾ ಸದ್ಯ ಅನುರಾಗ್ ಬಸು ನಿರ್ದೇಶನದ ಹಿಂದಿ ಸಿನಿಮಾ ಹಾಗೂ ತೆಲುಗಿನ ‘ಉಸ್ತಾದ್ ಭಗತ್ ಸಿಂಗ್’ನಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್
ಎಂಟು ವರ್ಷಗಳ ಒಂದಾದ ಜೋಡಿ
ಧನುಷ್ ಅಭಿನಯದ 55ನೇ ಚಿತ್ರದಲ್ಲಿ ಶ್ರೀಲೀಲಾ ಜತೆಗೆ ಸಾಯಿಪಲ್ಲವಿ ಕೂಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ತಮಿಳಿನ ‘ಮಾರಿ 2’ದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಎಂಟು ವರ್ಷಗಳ ಬಳಿಕ ಮತ್ತೆ ಒಂದಾಗಿದೆ. ಈ ಮೊದಲು ‘ಡಿ-55’ ಚಿತ್ರಕ್ಕೆ ಸಾಯಿಪಲ್ಲವಿ ನಾಯಕಿಯಾಗಿದ್ದರು, ಆದರೆ, ಡೇಟ್ಸ್ ಕಾರಣಕ್ಕೆ ಅವರ ಜಾಗಕ್ಕೆ ಶ್ರೀಲೀಲಾ ಬಂದಿದ್ದಾರೆ ಎನ್ನಲಾಗಿತ್ತು. ಅದು ಸುಳ್ಳಾಗಿದ್ದು, ಶ್ರೀಲೀಲಾ ಜತೆಗೆ ಸಾಯಿಪಲ್ಲವಿ ಕೂಡ ಚಿತ್ರದಲ್ಲಿರುವುದು ಖಚಿತವಾಗಿದೆ. ‘ಅಮರನ್’ ಬಳಿಕ ರಾಜ್‌ಕುಮಾರ್ ಪೆರಿಯಸಾಮಿ ಜತೆ ಸಾಯಿಪಲ್ಲವಿ ಮತ್ತೆ ಕೆಲಸ ಮಾಡಲಿದ್ದಾರೆ. ಸದ್ಯ ನಟಿ ಹಿಂದಿಯ ‘ಏಕ್ ದಿನ್’, ‘ರಾಮಾಯಣ ಭಾಗ-1’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net