ಅನಿರುದ್ಧ್-ಕಾವ್ಯಾ ಅದ್ಧೂರಿ ಮದುವೆ: ಗ್ರೀಸ್​ನತ್ತ ಹೊರಟ ಗಣ್ಯರ ದಂಡು, ಕುಟುಂಬ ಸಮೇತ ವಿಮಾನವೇರಿದ ರಜನಿ! Anirudh Ravichander-Kavya Maran

ಅದ್ಧೂರಿ ಡೆಸ್ಟಿನೇಷನ್ ಮದುವೆಗೆ ಸಾಕ್ಷಿಯಾಗಲು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಕುಟುಂಬ ಸಮೇತರಾಗಿ ಗ್ರೀಸ್‌ಗೆ ತೆರಳಿದ್ದಾರೆ. ಇವರೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಹಾಗೂ ಪ್ರಭಾವಿ ಉದ್ಯಮಿಗಳು ವಿಮಾನ ನಿಲ್ದಾಣದಲ್ಲಿ ಗ್ರೀಸ್‌ಗೆ ಹೊರಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Anirudh Ravichander-Kavya Maran
ಅನಿರುದ್ಧ್-ಕಾವ್ಯಾ ಅದ್ಧೂರಿ ಮದುವೆ: ಗ್ರೀಸ್​ನತ್ತ ಹೊರಟ ಗಣ್ಯರ ದಂಡು, ಕುಟುಂಬ ಸಮೇತ ವಿಮಾನವೇರಿದ ರಜನಿ!
Published on: 

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ( Anirudh Ravichander-Kavya Maran )​ ಮದುವೆ ಆಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಅದ್ಧೂರಿ ವಿವಾಹ ಪ್ರವಾಸಿಗರ ಸ್ವರ್ಗ ಗ್ರೀಸ್​ನಲ್ಲಿ ನಡೆಯಲಿದ್ದು, ಈಗಾಗಲೇ ಮದುವೆಯ ಸಿದ್ಧತೆಗಳು ಆರಂಭವಾಗಿವೆ. ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ನಡೆಯಲಿರುವ ಭರ್ಜರಿ ಕಲ್ಯಾಣ ಮಹೋತ್ಸವಕ್ಕೆ ಭಾರತದ ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯಾತಿಗಣ್ಯರು ಭಾಗವಹಿಸಲಿದ್ದು, ಎಲ್ಲರೂ ಈಗಾಗಲೇ ವಿಮಾನವೇರಿ ಗ್ರೀಸ್​ನತ್ತ ಪ್ರಯಾಣ ಬೆಳೆಸಿದ್ದಾರೆ.

ಈ ಅದ್ಧೂರಿ ಡೆಸ್ಟಿನೇಷನ್ ಮದುವೆಗೆ ಸಾಕ್ಷಿಯಾಗಲು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಕುಟುಂಬ ಸಮೇತರಾಗಿ ಗ್ರೀಸ್‌ಗೆ ತೆರಳಿದ್ದಾರೆ. ಇವರೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಹಾಗೂ ಪ್ರಭಾವಿ ಉದ್ಯಮಿಗಳು ವಿಮಾನ ನಿಲ್ದಾಣದಲ್ಲಿ ಗ್ರೀಸ್‌ಗೆ ಹೊರಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಗಣ್ಯರ ಉಪಸ್ಥಿತಿಯು ಹೈ-ಪ್ರೊಫೈಲ್ ಮದುವೆಗೆ ಮತ್ತಷ್ಟು ಮೆರುಗು ತಂದಿದೆ.

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ನೆಟ್‌ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ನಡುವೆ ಕಳೆದ ಕೆಲ ವರ್ಷಗಳಿಂದ ಉತ್ತಮ ಒಡನಾಟವಿತ್ತು. ಇದೀಗ ಇಬ್ಬರ ಮದುವೆಯನ್ನು ಹಿರಿಯರು ನಿಶ್ಚಯಿಸಿದ್ದು, ವಿದೇಶದಲ್ಲಿ ನಡೆಯುತ್ತಿರುವ ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಅತ್ಯಂತ ನಿಕಟ ಸಂಬಂಧಿಗಳು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅತಿಥಿಗಳ ವಿಮಾನ ಪಯಣ ಮತ್ತು ಅವರ ತಂಗುವಿಕೆಯನ್ನು ಮಾರನ್ ಕುಟುಂಬವೇ ನೋಡಿಕೊಳ್ಳುತ್ತಿದೆ.

Also Read
ರಾಮಾಯಣ ಸಿನಿಮಾದಲ್ಲಿ ಈ ನಟಿ ಆಟಕ್ಕುಂಟು ಲೆಕ್ಕಕ್ಕಿಲ್ಲ...ಇದು ಪ್ರತಿಭೆಗೆ ಮಾಡಿದ ಮಹಾ ಮೋಸ ಎಂದು ಆಕ್ರೋಶ! Ramayana
Anirudh Ravichander-Kavya Maran

ಗ್ರೀಸ್‌ನಲ್ಲಿ ನವೆಂಬರ್ 10 ಮತ್ತು 11 ರಂದು ವಿವಾಹ ಕಾರ್ಯಕ್ರಮ ನೆರವೇರಿದ ಬಳಿಕ, ನವೆಂಬರ್ 21 ರಂದು ಚೆನ್ನೈನಲ್ಲಿ ಅದ್ದೂರಿಯಾಗಿ ಮದುವೆಯ ಆರತಕ್ಷತೆ (Reception) ಕಾರ್ಯಕ್ರಮ ನಡೆಯಲಿದೆ. ಚೆನ್ನೈನಲ್ಲಿ ನಡೆಯಲಿರುವ ಅದ್ಧೂರಿ ರಿಸೆಪ್ಷನ್ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಕ್ರಿಕೆಟಿಗರು, ಚಲನಚಿತ್ರ ರಂಗದ ಅಗ್ರ ನಟ-ನಟಿಯರು ಮತ್ತು ದೇಶದ ಪ್ರತಿಷ್ಠಿತ ಉದ್ಯಮಿಗಳಿಗೆ ಆಹ್ವಾನ ಪತ್ರಿಕೆ ತಲುಪಿದೆ.

ಕಲಾ ಜಗತ್ತು ಹಾಗೂ ಉದ್ಯಮ ರಂಗದ ಈ ಎರಡು ದೊಡ್ಡ ಕುಟುಂಬಗಳ ಮಿಲನಕ್ಕೆ ದೇಶಾದ್ಯಂತ ಇರುವ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಶುಭ ಹಾರೈಸುತ್ತಿದ್ದಾರೆ. ಅಂದಹಾಗೆ, ಕಾವ್ಯಾ ಅವರು ಪ್ರಸ್ತುತ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮುಖ್ಯಸ್ಥೆಯಾಗಿ ಮತ್ತು ಸನ್ ನೆಟ್‌ವರ್ಕ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, (ಏಜೆನ್ಸೀಸ್​).