ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧದಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸಂಬಂಧ ಮುರಿದುಬಿದ್ದಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದರು. ಅವರ ಪತ್ನಿಯ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಯಿತು. ತ್ರಿಷಾ ರಾತ್ರಿ ವೇಳೆ ಕುಡಿದು ಬಂದು ವಿಜಯ್ ಮನೆ ಮುಂದೆ ನೃತ್ಯ ಮಾಡುತ್ತಿದ್ದರು ಎಂದರು. ಅಲ್ಲದೆ, ವಿಜಯ್, ತ್ರಿಷಾ ಅವರನ್ನು ತಮ್ಮ ಲವರ್ ಆಗಿ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಹರಡಲಾಯಿತು. ಕೀರ್ತಿ ಸುರೇಶ್ ಅವರ ಮದುವೆಗೆ ಹಾಜರಾಗಲು ವಿಜಯ್ ಮತ್ತು ತ್ರಿಷಾ ಖಾಸಗಿ ಜೆಟ್‌ನಲ್ಲಿ ಆಗಮಿಸಿದ್ದನ್ನು ಎದುರಾಳಿ ಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡವು. ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೆ ವಿಜಯ್ ಮದುವೆಗೆ ಹೋಗಿದ್ದು ವಿವಾದ ಸೃಷ್ಟಿಸಿತು ಎಂದು ಅಲಪ್ಪುಳ ಅಶ್ರಫ್ ಹೇಳಿದ್ದರು. ರಾಜಕೀಯ ದ್ವೇಷಿಗಳೇ ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಅಶ್ರಫ್ ತಿಳಿಸಿದ್ದರು. ಆದರೆ, ಇದೀಗ ವಿಜಯ್ ಪತ್ನಿ ಸಂಗೀತಾ, ಡಿವೋರ್ಸ್ಗೆ ಅರ್ಜಿ ಸಲ್ಲಿಸಿರುವುದನ್ನು ನೋಡಿದರೆ, ಊಹಾಪೋಹಗಳಿಗೆ ರಕ್ಕೆಪುಕ್ಕ ಬಂದಂತಾಗಿದೆ.