ಸಂಗೀತ ದಿಗ್ಗಜ ರೆಹಮಾನ್​ ಮದುವೆ ಆಗಲು ಬಯಸಿದ್ದರು ಈ ಸ್ಟಾರ್​ ನಟಿ... ಆಸೆಗೆ ತಣ್ಣೀರೆರಚಿದ್ದು ಮತಾಂತರ! AR Rahman

ಸಂಗೀತ ದಿಗ್ಗಜ ರೆಹಮಾನ್​ ಮದುವೆ ಆಗಲು ಬಯಸಿದ್ದರು ಈ ಸ್ಟಾರ್​ ನಟಿ... ಆಸೆಗೆ ತಣ್ಣೀರೆರಚಿದ್ದು ಮತಾಂತರ! AR Rahman
ಸಂಗೀತ ದಿಗ್ಗಜ ರೆಹಮಾನ್​ ಮದುವೆ ಆಗಲು ಬಯಸಿದ್ದರು ಈ ಸ್ಟಾರ್​ ನಟಿ... ಆಸೆಗೆ ತಣ್ಣೀರೆರಚಿದ್ದು ಮತಾಂತರ! AR Rahman
Published on

ಪ್ರಮುಖ ಮುಖ್ಯಾಂಶಗಳು

  • ಮೋಹಿನಿ 90ರ ದಶಕದಲ್ಲಿ ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬಹು ಬೇಡಿಕೆ ನಟಿ
  • 2011ರಲ್ಲಿ ಕೊನೆಯದಾಗಿ ಕಲೆಕ್ಟರ್​ ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿದರು
  • ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ 1999ರಲ್ಲಿ ಭರತ್​ ಎಂಬುವರನ್ನು ವರಿಸಿದರು
  • ಆರಂಭದಲ್ಲಿ ಸಂಗೀತ ದಿಗ್ಗಜ ಎ.ಆರ್​. ರೆಹಮಾನ್​ ಅವರನ್ನು ಮದುವೆ ಆಗಲು ಬಯಸಿದ್ದರಂತೆ ಮೋಹಿನಿ
AR Rahman : ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ಶ್ರೀರಾಮಚಂದ್ರ ಸಿನಿಮಾ ಬಗ್ಗೆ ಕೇಳಿದರೆ ಮೊದಲು ನೆನಪಾಗುವುದೇ "ಸುಂದರಿ ಸುಂದರಿ ಸುರ ಸುಂದರಿ" ಹಾಡು. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ವಿಭಿನ್ನವಾಗಿ ಹಾಡಿದ ಈ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತದೆ. ಈ ಹಾಡಲ್ಲಿ ರವಿಚಂದ್ರನ್​ ಜತೆ ಹೆಜ್ಜೆ ಹಾಕಿದ ನಟಿ ಮೋಹಿನಿ ಅವರು ಕನ್ನಡಿಗರಿಗೂ ಚಿರಪರಿಚಿತ. ಶ್ರೀರಾಮಚಂದ್ರ ಮಾತ್ರವಲ್ಲ, ಕಲ್ಯಾಣ ಮಂಟಪ, ಜ್ವಾಲಾ, ಸಿಡಿದೆದ್ದ ಪಾಂಡವರು, ರೌಡಿ, ಲಾಲಿ ಮತ್ತು ನಿಶ್ಯಬ್ದ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಕೂಡ ತಮ್ಮ ನಟನೆಯ ಮೂಲಕ ಮೋಹಿನಿ ಅವರು ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ಚೆನ್ನೈನಲ್ಲಿ ಜನಿಸಿದ ಮೋಹಿನಿ 90ರ ದಶಕದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿ ಎನಿಸಿಕೊಂಡರು. ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ 1999ರಲ್ಲಿ ಭರತ್​ ಎಂಬುವರನ್ನು ವರಿಸಿದ ಮೋಹಿನಿ, ಕಾಲಾನಂತರದಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು. 2011ರಲ್ಲಿ ಕೊನೆಯದಾಗಿ ಕಲೆಕ್ಟರ್​ ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿ, ಸಿನಿಮಾದಿಂದ ಅಂತರ ಕಾಯ್ದುಕೊಂಡರು.
ತಾಜಾ ಸಂಗತಿ ಏನೆಂದರೆ, ನಟಿ ಮೋಹಿನಿ ಅವರು ಆರಂಭದಲ್ಲಿ ಸಂಗೀತ ದಿಗ್ಗಜ ಎ.ಆರ್​. ರೆಹಮಾನ್​ ಅವರನ್ನು ಮದುವೆ ಆಗಲು ಬಯಸಿದ್ದರಂತೆ. ಈ ವಿಷಯವನ್ನು ಸ್ವತಃ ಮೋಹಿನಿ ಅವರೇ ಹೇಳಿಕೊಂಡಿದ್ದಾರೆ.

ಮದುವೆಯಾಗುವ ಆಸೆ ಇತ್ತು

ಇತ್ತೀಚೆಗೆ ನಡೆಸಿದ ಒಂದು ಸಂದರ್ಶನದಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಬಗ್ಗೆ ಮೋಹಿನಿ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನಾನು ರೆಹಮಾನ್ ಅವರ ದೊಡ್ಡ ಅಭಿಮಾನಿ ಎಂದಿರುವ ಮೋಹಿನಿ, ಅವರನ್ನು ತುಂಬಾ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗುವ ಆಸೆಯನ್ನು ಹೊಂದಿದ್ದೆ ಎಂದಿದ್ದಾರೆ.

ನನ್ನ ಹೃದಯಕ್ಕೆ ಭಂಗವಾಯಿತು

ರೆಹಮಾನ್​ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಾಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಹೇಳಬೇಕೆಂದರೆ, ನನ್ನ ಹೃದಯಕ್ಕೆ ಭಂಗವಾಯಿತು. ಇದರಿಂದಾಗಿ ನನ್ನ ಮದುವೆಯ ಯೋಚನೆಯನ್ನು ಬದಲಾಯಿಸಿಕೊಂಡೆ. ಆರಂಭದಲ್ಲಿ ದಿಲೀಪ್​ ಆಗಿದ್ದ ಅವರು ಮತಾಂತರವಾಗದೇ ದಿಲೀಪ್​ ಆಗಿಯೇ ಉಳಿದಿದ್ದರೆ, ನಾನು ನಮ್ಮ ಮನೆಯವರನ್ನು ಒಪ್ಪಿಸಿ, ಅವರನ್ನು ಮದುವೆ ಆಗುತ್ತಿದ್ದೆ ಎಂದು ಸಂದರ್ಶನದಲ್ಲಿ ಮೋಹಿನಿ ಹೇಳಿಕೊಂಡಿದ್ದಾರೆ.
2011 ರವರೆಗೆ ನಟನಾ ಲೋಕದಲ್ಲಿದ್ದ ಮೋಹಿನಿ, ಆನಂತರ ಭರತ್ ಎಂಬ ವ್ಯಕ್ತಿಯನ್ನು ಮದುವೆಯಾಗಿ ವೈವಾಹಿಕ ಜೀವನದಲ್ಲಿ ನೆಲೆಸಿದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅಂದಹಾಗೆ, ಎ.ಆರ್. ರೆಹಮಾನ್ ಪ್ರಸ್ತುತ ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜಿಸುವಲ್ಲಿ ನಿರತರಾಗಿದ್ದಾರೆ. ರಾಮಾಯಣ 1 ಮತ್ತು 2 ಹಿಂದಿ ಚಿತ್ರಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net