ಖುಷ್ಬೂ ಮತ್ತು ನಿರ್ದೇಶಕ, ನಟ ಸುಂದರ್ ಸಿ ದಂಪತಿಯ ಹಿರಿಯ ಪುತ್ರಿ ಅವಂತಿಕಾ ಅವರ ವಿವಾಹವು ಗೋವಾದಲ್ಲಿ ಗುರುವಾರ (ಜೂ.25) ಸಂಜೆ ಅದ್ಧೂರಿಯಾಗಿ ನೆರವೇರಿತು. ಈ ಸ್ಟಾರ್ ವಿವಾಹ ಸಮಾರಂಭದಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಸ್ಟಾರ್ ಕಲಾವಿದರು ಭಾಗವಹಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಅಕ್ಕಿನೇನಿ, ವೆಂಕಟೇಶ್, ಅನಿಲ್ ಕಪೂರ್, ಜಾಕಿ ಶ್ರಾಫ್, ತ್ರಿಶಾ ಕೃಷ್ಣನ್, ಅಮಲಾ ಅಕ್ಕಿನೇನಿ ಸೇರಿ ಹಲವು ತಾರೆಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು,(ಏಜೆನ್ಸೀಸ್).