250 ಕೋಟಿ ರೂ... ವಿಜಯ್​-ಸಂಗೀತಾ ಡಿವೋರ್ಸ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​! ತ್ರಿಷಾ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಈ ನಿರ್ಧಾರ? | Vijay-Trisha

ನಟ ವಿಜಯ್​ ಡಿವೋರ್ಸ್​ ಪ್ರಕರಣ
ನಟ ವಿಜಯ್​ ಡಿವೋರ್ಸ್​ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ವಿಚ್ಛೇದನ ಪ್ರಕರಣ
  • ಡಿವೋರ್ಸ್​ ಬೆನ್ನಲ್ಲೇ ನಟಿ ತ್ರಿಷಾ ಜೊತೆ ವಿಜಯ್​ ಪ್ರತ್ಯಕ್ಷ
  • ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡ ತ್ರಿಷಾ-ವಿಜಯ್​
  • ಡಿವೋರ್ಸ್​ ಪ್ರಕರಣವನ್ನು ಕೋರ್ಟ್​ನಿಂದ ಹೊರಗೆ ಸೆಟಲ್​ ಮಾಡಿಕೊಳ್ಳಲು ದಳಪತಿ ಹೆಜ್ಜೆ
ಚೆನ್ನೈ: ತಮಿಳು ಚಿತ್ರರಂಗದ​ ಸೂಪರ್​ ಸ್ಟಾರ್​ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Thrisha) ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇವರಿಬ್ಬರ ಡಿವೋರ್ಸ್​ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಪುಷ್ಠಿ ಎನ್ನುವಂತೆ ಇತ್ತೀಚಿಗೆ ಮದುವೆ ಸಮಾರಂಭದಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು. ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂದರ್ಭದಲ್ಲೇ ತ್ರಿಷಾ ಜೊತೆಗೆ ವಿಜಯ್​ ಮದುವೆಗೆ ಕಾರಿನಲ್ಲಿ ಬಂದ ದೃಶ್ಯ ಸದ್ಯ ಊಹಾಪೋಹಗಳೇ ಸತ್ಯ ಎಂದು ಒತ್ತಿ ಹೇಳುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ. ಇಲ್ಲಿಯವರೆಗೂ ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್​ ಜೋಡಿ, ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ, ಮತ್ತೊಂದು ಸ್ಫೋಟಕ ಸಂಗತಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಕೋರ್ಟ್​ ಹೊರಗೆ ಈ ಕೇಸ್​ ಬಗೆಹರಿಸಿಕೊಳ್ಳಲು ವಿಜಯ್ ಮುಂದಾಗಿದ್ದಾರೆ ಎನ್ನಲಾಗಿದೆ.

250 ಕೋಟಿ ರೂ. ಸೆಟಲ್​ಮೆಂಟ್​?

ತಮ್ಮ ಪತ್ನಿ ಸಂಗೀತಾ ಹಾಗೂ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಶಾ ಅವರಿಗೆ 250 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಮೊತ್ತವನ್ನು ಹೇಗೆ ಹಂಚಿಕೆ ಮಾಡಲಾಗುವುದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ, ಮೊದಲು ಸಂಗೀತಾ ಅವರು ಪತಿಯ ಈ ಆಫರ್​ಗೆ ಒಪ್ಪುತ್ತಾರೋ ಅಥವಾ ತಿರಸ್ಕರಿಸುತ್ತಾರೋ ಎಂಬುದನ್ನು ತಿಳಿಯಬೇಕಿದೆ. ಈ ವರದಿ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಲಭಿಸಬೇಕಿದೆ,(ಏಜೆನ್ಸೀಸ್).

ಒಂದೇ ಕಾರಿನಲ್ಲಿ, ಜತೆಗೆ ಹೆಜ್ಜೆ

ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದೇ ತಡ ತ್ರಿಷಾ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಹಿಂದೆಯೂ ಹಲವರು ಬಾರಿ ದಳಪತಿ ಹೆಸರಿನೊಂದಿಗೆ ಕೇಳಿಬಂದ ಸ್ಟಾರ್ ನಟಿಯ ಹೆಸರು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಸಾಕಷ್ಟು ಆರೋಪ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ.

ಮದುವೆ ಸಮಾರಂಭದಲ್ಲಿ ತ್ರಿಷಾ-ವಿಜಯ್ ಮಿಂಚಿಂಗ್​

ಇಬ್ಬರು ಜೊತೆಗೆ ನಿಂತು ತೆಗೆಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಊಹಾಪೋಹಗಳನ್ನು ಇನ್ನಷ್ಟು ಬಲಪಡಿಸುತ್ತಿದೆ. ತ್ರಿಷಾ ಅವರು ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಟಿ. ವಯಸ್ಸು 40 ದಾಟಿದರು ಕೂಡ ಇಂದಿಗೂ ಸ್ಟಾರ್​ ನಾಯಕಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ತೆರೆಯ ಮೇಲೆ ವಿಜಯ್ ಮತ್ತು ತ್ರಿಷಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿದೆ. ಕಳೆದ 20 ವರ್ಷಗಳಲ್ಲಿ ಅವರಿಬ್ಬರು 5 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವುದು ಗಮನಾರ್ಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net