ತಮ್ಮ ಡಿವೋರ್ಸ್ ವದಂತಿ ಕುರಿತು ಮೌನ ಮುರಿದಿರುವ ವಿಜಯ್, ಈ ಬಗ್ಗೆ ಚಿಂತೆ ಮಾಡಬೇಡಿ ಎಂದು ಅಭಿಮಾನಿಗಳು ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ(ಮಾ. 07) ಮಾತನಾಡಿರುವ ಅವರು, ಇತ್ತೀಚೆಗೆ ಹಲವಾರು ಸಮಸ್ಯೆಗಳು ಹೊರಹೊಮ್ಮಿವೆ, ಇದು ಅವರ ಬೆಂಬಲಿಗರಲ್ಲಿ ಕಳವಳವನ್ನುಂಟುಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವಾಗ ಯಾರನ್ನು ನೋಯಿಸದಂತೆ ಮತ್ತು ಆತ್ಮವಿಶ್ವಾಸದಿಂದ ಇರಲು ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಮುಂದುವರೆದು, ಈ ವಿಷಯವು ಪಕ್ಷದ ಬೆಂಬಲಿಗರನ್ನು ಚಿಂತೆಗೀಡು ಮಾಡಬಾರದು ಮತ್ತು ಅದನ್ನು ನಾನೇ ನಿಭಾಯಿಸುತ್ತೇನೆ. ನೀವು ನನಗಾಗಿ ಹೋರಾಡುತ್ತಿದ್ದೀರಿ ಮತ್ತು ನೋಯಿಸಿಕೊಳ್ಳುತ್ತಿದ್ದೀರಿ. ಅದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ದುಃಖಿಸಬೇಡಿ ಅಥವಾ ಚಿಂತಿಸಬೇಡಿ. ನನಗೆ ದುಃಖವಿಲ್ಲ. ಒಳ್ಳೆಯದು ಮಾತ್ರ ಸಂಭವಿಸುತ್ತದೆ ಎಂದಿದ್ದಾರೆ, (ಏಜೆನ್ಸೀಸ್).