ಕಳೆದ ಐದು ವರ್ಷಗಳಿಂದ ನಾನು ಮತ್ತು ವಿಜಯ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ ಮತ್ತು ಈಗ ವಿಚ್ಛೇದನ ಬಯಸುತ್ತಿದ್ದೇವೆ ಎಂದು ಸಂಗೀತಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇನ್ನು ಕೌಟುಂಬಿಕ ಸಂಬಂಧಗಳನ್ನು ಬಹಳವಾಗಿ ಗೌರವಿಸುವ ವಿಜಯ್ ಅವರ ಜೀವನದಲ್ಲಿ ಕೆಲವು ವಿಷಯಗಳು ಇದ್ದಕ್ಕಿದ್ದಂತೆ ಸಂಭವಿಸಿವೆ. ಆರೋಪ ಎದುರಿಸುತ್ತಿರುವ ನಟಿ ಮತ್ತು ವಿಜಯ್ ವರ್ಷಗಳಿಂದ ಒಟ್ಟಿಗೆ ನಟಿಸುತ್ತಿದ್ದಾರೆ. ಅವರು, ತಮ್ಮ ಯುವ ವಯಸ್ಸಿನಲ್ಲಿಯೂ ಒಟ್ಟಿಗೆ ನಟಿಸಿದ್ದಾರೆ. ಆದರೆ, ಆ ಸಮಯದಲ್ಲಿ ಯಾವುದೇ ಗಾಸಿಪ್ಗಳು ಇರಲಿಲ್ಲ. ಆದರೆ, ಸ್ವಲ್ಪ ಸಮಯದ ಹಿಂದೆ, ಇಬ್ಬರೂ ಮತ್ತೆ ಒಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಬಳಿಕ ವಿವಾಹೇತರ ಸಂಬಂಧಗಳ ಚರ್ಚೆ ಹುಟ್ಟಿಕೊಂಡವು. ಇಬ್ಬರು ಮಾನಸಿಕವಾಗಿ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. 40 ವರ್ಷಗಳ ನಂತರವೂ ಮದುವೆಯಾಗದ ಆ ನಟಿ, ನಟ ವಿಜಯ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ವಿಜಯ್ ಕೂಡ ಆ ನಟಿಯನ್ನು ಪ್ರೀತಿಸುತ್ತಿದ್ದಾರೆ ಸುದ್ದಿಗಳು ಹರಿದಾಡುತ್ತಿವೆ.