OTT ಗೆ ಕಾಲಿಟ್ಟ ಕಾಫಿ ವಿತ್ ಕರಣ್ ಸೀಸನ್ 7

Karan Johar - Final
Published on

ಮುಂಬೈ: ಬಾಲಿವುಡ್‌ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿಥ್ ಕರಣ್‌ನ 7ನೇ ಸೀಸನ್ ಜುಲೈ 7 ರಂದು OTT ಗೆ ಬರಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಸೋಶಿಯಲ್‌ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿಯ ಕ್ರೇಜಿ ಟಾಕ್ ಶೋ 'ಕಾಫಿ ವಿಥ್ ಕರಣ್' ಸೀಸನ್ 7 ಪ್ರಾರಂಭವಾಗಲಿದೆ ಎಂಬ ಸುದ್ದಿ ತಿಳಿದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿಥ್ ಕರಣ್' ಕಾರ್ಯಕ್ರಮದ ಏಳನೇ ಸೀಸನ್ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆಗಲಿದೆ ಎಂದು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

ಕಾಫಿ ವಿಥ್ ಕರಣ್ ಮೊದಲ ಬಾರಿಗೆ ಟಿವಿ ಚಾನೆಲ್ ಸ್ಟಾರ್ ವರ್ಲ್ಡ್ ನಲ್ಲಿ 2004 ರಲ್ಲಿ ಪ್ರಥಮ ಪ್ರದರ್ಶನಗೊಂಡಿತು. 2019 ರವರೆಗೆ ಸ್ಮಾಲ್‌ ಸ್ಕ್ರೀನ್‌ ಮೇಲೆ ಆರು ಸೀಸನ್‌ಗಳನ್ನು ಪ್ರಸಾರ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net