ಭೀಮ್​ ಮತ್ತು ರಾಮರಾಜು ಕೈಜೋಡಿಸಿದಾಗ ... 'ಆರ್​ಆರ್​ಆರ್​' ಚಿತ್ರದ ಕ್ಲೈಮ್ಯಾಕ್ಸ್​ ಶುರು

RRR - Climax Final
Published on

ಹೈದರಾಬಾದ್​: ಅಂತೂ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್​ಆರ್​ಆರ್​' ಚಿತ್ರದ ಕ್ಲೈಮ್ಯಾಕ್ಸ್​ ಹಂತದ ಚಿತ್ರೀಕರಣ ಶುರುವಾಗಿದೆ. ಈ ಕ್ಲೈಮ್ಯಾಕ್ಸ್​ನಲ್ಲಿ ಭೀಮ್​ ಮತ್ತು ರಾಮರಾಜು ಪಾತ್ರಗಳು ಬ್ರಿಟಿಷರ ವಿರುದ್ಧ ದಂಡೆತ್ತಿ ಹೋಗಲಿದ್ದು, ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್​ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡುವ ಕಥೆ ಇರುವ ಚಿತ್ರ 'ಆರ್​ಆರ್​ಆರ್​'. ಈ ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್​ ಚಿತ್ರೀಕರಣ ಶುರುವಾಗಿದೆ ಎಂದು ರಾಜಮೌಳಿ ಟ್ವೀಟ್​ ಮಾಡಿದ್ದಾರೆ.

ಈ ಕ್ಲೈಮ್ಯಾಕ್ಸ್​ನಲ್ಲಿ ಭೀಮ್​ ಮತ್ತು ರಾಮರಾಜು ಇಬ್ಬರೂ ಮಹತ್ತರವಾದದ್ದೇನನ್ನೋ ಸಾಧಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಾರೆ ಎಂದು ರಾಜಮೌಳಿ ಹೇಳಿದ್ದಾರೆ. ಆದರೆ, ಏನು ಸಾಧಿಸುತ್ತಾರೆ ಎಂಬ ವಿಷಯವನ್ನು ಚಿತ್ರಮಂದಿಗಳಲ್ಲೇ ನೋಡಿ ಎಂದು ಹೇಳಿದ್ದಾರೆ.

'ಆರ್‌ಆರ್‌ಆರ್‌' ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ, ಆಲಿಯಾ ಭಟ್​, ಅಜಯ್​ ದೇವಗನ್​, ಶ್ರೇಯಾ ಶರಣ್​ ಮುಂತಾದವರು ನಟಿಸುತ್ತಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಕಥೆ ರಚಿಸಿದ್ದಾರೆ.

ಈಗಾಗಲೇ ಹೈದರಾಬಾದ್​ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಿ, 2021ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net