ಸಿಂಗಲ್ ಟೇಕ್ ಸಹಿಷ್ಣು; ಐಫೋನ್​ನಲ್ಲಿ ಸಿನಿಮಾ ಶೂಟಿಂಗ್

Sahishnu
Published on

ಬೆಂಗಳೂರು: ಕನ್ನಡದಲ್ಲಿ ಒಂದೇ ಟೇಕ್​ನಲ್ಲಿ ಚಿತ್ರೀಕರಣಗೊಂಡ ಕೆಲವು ಸಿನಿಮಾಗಳಿವೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಸಹಿಷ್ಣು’. ಸಂಪತ್ ಎಂಬುವವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಎರಡು ತಾಸು ಅವಧಿಯ ಈ ಚಿತ್ರವನ್ನು ಸಂಪೂರ್ಣವಾಗಿ ಐಫೋನ್​ನಲ್ಲಿ ಸೆರೆಹಿಡಿಯಲಾಗಿದೆ. ಪ್ಲಾಷ್​ಬ್ಯಾಕ್ ಭಾಗ ಸಹ ಸಿನಿಮಾದಲ್ಲಿದ್ದು, ಮಡಿಕೇರಿಯ ಹಲವು ಲೊಕೇಷನ್​ಗಳಲ್ಲಿ ಶೂಟಿಂಗ್ ಮಾಡಲಾಗಿರುವುದು ವಿಶೇಷ.

ಹೊಸಬರ ಈ ಸಾಹಸಕ್ಕೆ ಹಲವು ಪ್ರಶಸ್ತಿಗಳೂ ಸಿಕ್ಕಿದ್ದು, ರಜನಿಕಾಂತ್ ಕಡೆಯಿಂದಲೂ ಚಿತ್ರತಂಡಕ್ಕೆ ಮೆಚ್ಚುಗೆ ಸಿಕ್ಕಿದೆಯಂತೆ. ಸಿಲ್ವರ್ ಸ್ಕ್ರೀನ್ ಸಿನಿಮಾಸ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅನಂತ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ವಿಶ್ವನಾಥ್, ಅಶೋಕ್, ಸಂಪತ್, ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net