

ಮಂಸೋರೆ ನಿರ್ದೇಶನದ ಮೂರನೆಯ ಚಿತ್ರ ‘ಆ್ಯಕ್ಟ್ 1978’ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕಾ? ಓಟಿಟಿಯಲ್ಲಿ ತೆರೆಕಾಣಿಸಬೇಕಾ? ಎಂಬ ಚಿಂತನ-ಮಂಥನ ಚಿತ್ರತಂಡದವರ ನಡುವೆ ನಡೆಯಿತಂತೆ. ಕೊನೆಗೆ ಸಾಕಷ್ಟು ವಾದ-ಪ್ರತಿವಾದಗಳ ನಂತರ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ.
ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆ ಆಗುವುದು ಹೌದಾದರೂ, ಯಾವಾಗ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಪ್ರೇಕ್ಷಕ ಈಗಷ್ಟೇ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿರುವುದರಿಂದ ನೋಡಿ, ಮುಂದಿನ ವಾರದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು, ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂಬುದನ್ನು ನವೆಂಬರ್ 1ರ ರಾಜ್ಯೋತ್ಸವದಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಒಂದಿಷ್ಟು ಘಟನೆಗಳಿಂದ ಸ್ಪೂರ್ತಿಗೊಂಡು ನಿರ್ವಣವಾಗಿರುವ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಶ್ರುತಿ, ಪ್ರಮೋದ್ ಶೆಟ್ಟಿ, ಅವಿನಾಶ್, ಅಚ್ಯುತ್ ಕುಮಾರ್, ದತ್ತಣ್ಣ, ಬಿ. ಸುರೇಶ, ಕೃಷ್ಣ ಹೆಬ್ಬಾಳೆ, ಸಂಚಾರಿ ವಿಜಯ್, ಶೋಭರಾಜ್ ಮುಂತಾದ ಪ್ರತಿಭಾವಂತ ನಟರ ದಂಡೇ ಇದೆ. ದೇವರಾಜ್ ನಿರ್ವಿುಸಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.