ಮೊದಲ ಆಲ್ಬಂ ಸಾಂಗ್​ನಲ್ಲೇ ಮಗ್ನೇ ಎಂದ ನೃತ್ಯನಿರ್ದೇಶಕ ವಾಲೀಸ್ ಸಂತೋಷ್​...

xasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಮಾಗಡಿಯ ರೈತಕುಟುಂಬದ ಹುಡುಗ ವಾಲೀಸ್ ಸಂತೋಷ್​, ಇದೀಗ ಚಿತ್ರರಂಗದಲ್ಲಿ ಡಾನ್ಸರ್​, ಕೋರಿಯೋಗ್ರಫರ್​ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಡಿಕೆಡಿ, ತೆಲುಗಿನ ಢೀ ಸೇರಿ ತಮಿಳಿನ ರಿಯಾಲಿಟಿ ಶೋಗಳಲ್ಲೂ ಕುಣಿದು ಕುಪ್ಪಳಿಸಿರುವ ಅವರು, ಹಲವು ನೃತ್ಯನಿರ್ದೇಶಕರ ಡಾನ್ಸರ್​ ಜತೆ ಕೆಲಸ ಮಾಡಿ ಅನುಭವ ಪಡೆದು, ಸದ್ಯ ತಾವೇ ನೃತ್ಯನಿರ್ದೇಶನ ಮಾಡುತ್ತಿದ್ದಾರೆ. ನಟನೆಯ ಕನಸು ಹೊತ್ತು ಚಿತ್ರರಂಗಕ್ಕೆ ಬಂದು ನೃತ್ಯನಿರ್ದೇಶಕನಾಗಿ ಛಾಪು ಮೂಡಿಸಿರುವ ಅವರು, ಇತ್ತೀಚೆಗಷ್ಟೆ ‘ಮಗ್ನೇ‘ ಎಂಬ ಮೊದಲ ಆಲ್ಬಂ ವಿಡಿಯೋ ಸಾಂಗ್​ ರಿಲೀಸ್​ ಮಾಡಿದ್ದಾರೆ.

‘ಮಗ್ನೇ, ಚಟ್ಟಂತ ಒಟ್ರೆ ಮುಟ್​ ನೋಡಬೇಕು‘ ಎಂದು ಸಾಗುವ ಈ ಡಾನ್ಸ್​ ನಂಬರ್​ಅನ್ನು ಇತ್ತೀಚೆಗಷ್ಟೆ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಬಿಡುಗಡೆ ಮಾಡಿ ವಾಲೀಸ್ ಸಂತೋಷ್ ಮತ್ತು ತಂಡಕ್ಕೆ ಶುಭಹಾರೈಸಿದ್ದಾರೆ. ಈ ಆಲ್ಬಂ ಸಾಂಗ್ ಬೆನ್ನಲ್ಲೇ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುವ ಉತ್ಸಾಹದಲ್ಲಿದ್ದಾರೆ ಸಂತೋಷ್​. ಹೀಗಾಗಿ ತಮ್ಮದೇ ಯುವತಂತ್ರಜ್ಱರ ತಂಡ ಕಟ್ಟಿಕೊಂಡು ಸಿದ್ಧತೆ ನಡೆಸುತ್ತಿದ್ದಾರೆ.

‘ಮಗ್ನೇ‘ ಸಾಂಗ್​ಗೆ ಮಾರುತಿ ರಾವ್ ಸಂಕಲನ ಮತ್ತು ಛಾಯಾಗ್ರಹಣವಿದ್ದು, ಧ್ರುವ ಕೇಶವ್​ ಸಂಗೀತ, ತೇಜಸ್​ ಕುಮಾರ್​ ಸಾಹಿತ್ಯದಲ್ಲಿ ಮೂಡಿಬಂದಿದೆ. ಪಕ್ಕಾ ಮಾಸ್​ ಶೈಲಿಯಲ್ಲಿ ಒಬ್ಬ ಕಮರ್ಷಿಯಲ್​ ಹೀರೋಗೆ ನೀಡುವ ಬಿಲ್ಡಪ್​ ಸಾಂಗ್ ರೀತಿ ಈ ಆಲ್ಬಂ ಹಾಡು ಮೂಡಿಬಂದಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net