ಕರೊನಾ ಎಫೆಕ್ಟ್: ಮೊಮ್ಮಕ್ಕಳನ್ನು ತಬ್ಬಿಕೊಳ್ಳೋಕೂ ಹೆದರಿದ ಚಿರಂಜೀವಿ

Chiranjeevi
Published on

ಕರೊನಾ ಸೋಂಕು ಹರಡುವ ಭಯ ಎಲ್ಲರನ್ನೂ ಕಾಡುತ್ತಿದೆ. ಅದೇ ಕಾರಣಕ್ಕೆ ಎಷ್ಟೋ ಜನ ಮನೆಬಿಟ್ಟು ಹೊರಬರುತ್ತಿಲ್ಲ. ಹೊರಬಂದರೂ ಸೋಷಿಯಲ್ ಡಿಸ್ಟನ್ಸ್ ಪಾಲಿಸುತ್ತಿದ್ದಾರೆ. ಯಾರನ್ನೂ ಮುಟ್ಟದೆ ದೂರ ಇರುತ್ತಿದ್ದಾರೆ. ಇದಕ್ಕೆ ‘ಮೆಗಾ ಸ್ಟಾರ್’ ಚಿರಂಜೀವಿ ಸಹ ಹೊರತಲ್ಲ. ಈ ಸಂಬಂಧ ಇತ್ತೀಚೆಗೆ ನಡೆದ ಘಟನೆಯೊಂದನ್ನು ಚಿರಂಜೀವಿ ಹಂಚಿಕೊಂಡಿದ್ದಾರೆ.

ಲಾಕ್‌ಡೌನ್ ಘೋಷಣೆಯಾದಾಗಿನಿಂದ ಹೆಂಡತಿ ಮತ್ತು ತಾಯಿಯ ಜತೆಗೆ ಮನೆಯಲ್ಲೇ ಇದ್ದಾರೆ ಚಿರಂಜೀವಿ. ಈ ಮಧ್ಯೆ ಒಂದು ದಿನ ಮಗಳು ಮತ್ತು ಮೊಮ್ಮಕ್ಕಳು ಮನೆಗೆ ಬಂದರಂತೆ. ಮೊಮ್ಮಕ್ಕಳನ್ನು ನೋಡಿ ಪ್ರೀತಿಯಿಂದ ತಬ್ಬಿಕೊಳ್ಳುವುದಕ್ಕೆ ಅವರು ಮುಂದಾದರಂತೆ. ಆದರೆ, ಕರೊನಾ ಮುನ್ನೆಚ್ಚರಿಕೆಗಳು ನೆನಪಾಗಿ, ಮೊಮ್ಮಕಳಿಗೆ ಏನೂ ತೊಂದರೆಯಾಗಬಾರದು ಎಂದು ಮುಟ್ಟಲಿಲ್ಲವಂತೆ.

‘ಸಹಜವಾಗಿಯೇ ಮೊಮ್ಮಕ್ಕಳನ್ನು ನೋಡಿ, ಅವರನ್ನು ತಬ್ಬಿಕೊಳ್ಳುವ ಮನಸ್ಸಾಯಿತು. ಆದರೆ, ಈಗ ಎಲ್ಲೆಡೆ ಕರೊನಾ ಸೋಂಕಿನ ಬಗ್ಗೆ ಭಯವಿರುವುದರಿಂದ ಸುಮ್ಮನಾಗಿಬಿಟ್ಟೆ. ಆ ಕ್ಷಣಕ್ಕೆ ನಾನು ಬಹಳ ಎಮೋಷನಲ್ ಆಗಿಬಿಟ್ಟೆ. ನಾನು ಮನೆಯಿಂದ ಎಲ್ಲೂ ಹೋಗದಿರುವುದರಿಂದ, ಮೊಮ್ಮಕ್ಕಳು ಸಹ ಮನೆ ಬಿಟ್ಟು ಹೊರಬರದಿದ್ದರಿಂದ ಯಾವುದೇ ಸಮಸ್ಯೆ ಇಲ್ಲ, ಅವರನ್ನು ಮುಟ್ಟುಬಹುದು, ಏನೂ ಆಗುವುದಿಲ್ಲ ಎಂದು ನನ್ನ ಮಗಳು ಅರ್ಥ ಮಾಡಿಸಿದಳು. ಆ ನಂತರ ಅವರನ್ನು ಮುಟ್ಟಿದೆ’ ಎಂದು ನೆನಪಿಸಿಕೊಂಡಿದ್ದಾರೆ ಚಿರಂಜೀವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net