

ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಶೂಟಿಂಗ್ ಇಷ್ಟರಲ್ಲಿ ಶುರುವಾಗಿಬಿಡಬೇಕಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಬಂತು ನೋಡಿ, ಚಿರಂಜೀವಿ ಪ್ಲಾನ್‌ಗಳೆಲ್ಲಾ ತಲೆಕೆಳಗಾಗಿದೆ. ಇದೀಗ ಈ ಲಾಕ್‌ಡೌನ್ ಸಮಯವನ್ನು ತಮ್ಮ ಫ್ಯಾಮಿಲಿಯೊಂದಿಗೆ ಕಳೆಯುತ್ತಿರವ ಮೆಗಾಸ್ಟಾರ್, ತಮ್ಮ ಮೊಮ್ಮಗಳ ಕ್ಯೂಟ್ ವೀಡಿಯೋವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಚಿರಂಜೀವಿ, ತಮ್ಮ ‘ಕೈದಿ ನಂಬರ್ 150’ ಚಿತ್ರದ ಹಾಡೊಂದನ್ನು ಟಿವಿಯಲ್ಲಿ ಹಾಕುತ್ತಾರೆ. ಅದನ್ನು ಕೇಳುವ ಅವರ ಒಂದು ವರ್ಷದ ಮೊಮ್ಮಗಳು ನವಿಷ್ಕಾ, ಹಾಡಿಗೆ ತಲೆದೂಗುತ್ತಾಳೆ. ಅಷ್ಟೇ ಅಲ್ಲ, ಹಾಡನ್ನು ಮ್ಯೂಟ್ ಮಾಡಿದಾಗ, ಪ್ಲೇ ಮಾಡುವುದಕ್ಕೆ ಹೇಳುತ್ತಾಳೆ.
ಈ ವೀಡಿಯೋ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಚಿರಂಜೀವಿ, ಇದನ್ನು ಪವರ್ ಆ್ ಮ್ಯೂಸಿಕ್ ಎಂದು ಕರೆದಿದ್ದಾರೆ. ‘ಈ ಸಂಗೀತದ ಶಕ್ತಿಯ ಬಗ್ಗೆ ನನಗೆ ಯಾವಾಗಲೂ ವಿಪರೀತ ಆಶ್ಚರ್ಯ. ಈ ಮಗುವಿಗೆ ಬರೀ ಒಂದು ವರ್ಷ. ಆದರೂ ಸಂಗೀತಕ್ಕೆ ಕುಣಿಯುವುದಕ್ಕೆ ಪ್ರಯತ್ನಿಸುತ್ತದೆ. ಆಕೆ ಎಂಜಾಯ್ ಮಾಡುತ್ತಿದ್ದಾಳಾ ಅಂತ ನೋಡುವುದಕ್ಕೆ ಪಾಸ್ ಮಾಡಿದರೆ, ಪ್ಲೇ ಮಾಡುವುದಕ್ಕೆ ಹೇಳುತ್ತಾಳೆ’ ಎಂದು ಮೊಮ್ಮಗಳೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ ಚಿರಂಜೀವಿ.
ಚಿರಂಜೀವಿ ಅವರ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ನಟಿ ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.