ಹೌದು, ಇದಕ್ಕೆ ಕಾರಣ ನಟ ಚಿರಂಜೀವಿ ಅವರು ಸಿಎಂ ಅನ್ನು ಭೇಟಿಯಾದ ನಂತರ ಅವರು ಆಡಿದ ಮಾತುಗಳು. 'ಜಗನ್ ಅವರನ್ನು ತೆಲುಗು ಸಿನಿಮಾರಂಗದ ಮುಖ್ಯಸ್ಥನಾಗಿ ಅಲ್ಲ, ಬದಲಿಗೆ ಚಿತ್ರರಂಗದ ಮಗನಾಗಿ ನಾನು ಭೇಟಿ ಮಾಡಿದ್ದೇನೆ. ಅವರಿಗೆ ನಮ್ಮ ಸಮಸ್ಯೆಗಳನ್ನು ತಿಳಿಸಿದ್ದೇನೆ. ಹಾಗಾಗಿ, ಸರ್ಕಾರ ಅದರ ಬೇರೆ ಹೊಸ ಆದೇಶವನ್ನು 2-3 ವಾರಗಳಲ್ಲಿ ತಿಳಿಸಲಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು, ಮುಖ್ಯಮಂತ್ರಿಗಳೂ ನನಗೆ ಹೇಳಿದರು. ದೊಡ್ಡ ಮತ್ತು ಸಣ್ಣ ಬಜೆಟ್ನ ಸಿನಿಮಾಗಳ ಭೇದವಿಲ್ಲದೆ ಸರ್ಕಾರದ ನಿರ್ಧಾರವು ಎಲ್ಲರಿಗೂ ಅನುಕೂಲಕರವಾಗಿರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ', ಅಂತ ಮೆಗಾಸ್ಟಾರ್ ಮಾದ್ಯಮ ಮಿತ್ರರಿಗೆ ತಿಳಿಸಿದ್ದಾರೆ. ಹಾಗಾದರೆ, ಜಗನ್ ಸರ್ಕಾರದ ಮುಂದಿನ ಆದೇಶ ಯಾವಾಗ ಬರಲಿದೆ ಎಂದು ಕಾದು ನೋಡಬೇಕಿದೆ.