ಎಐನಲ್ಲಿ ‘ಚಿರಂಜೀವಿ ಹನುಮಾನ್’: ರಾಷ್ಟ್ರಪ್ರಶಸ್ತಿ ವಿಜೇತ ರಾಜೇಶ್ ಮಾಪುಸ್ಕರ್ ನಿರ್ದೇಶನದಲ್ಲಿ ಪೌರಾಣಿಕ ಚಿತ್ರ

hanuman (1)
Published on

ಹನುಮಂತನ ಕುರಿತಂತೆ ಭಾರತೀಯ ಚಿತ್ರರಂಗದಲ್ಲಿ ಹಲವು ಸಿನಿಮಾ, ಧಾರಾವಾಹಿಗಳು, ಆ್ಯನಿಮೇಟೆಡ್ ಸರಣಿಗಳು ಬಂದಿವೆ ಹಾಗೂ ಬರುತ್ತಿವೆ. ನಟ ರಿಷಬ್ ಶೆಟ್ಟಿ- ಪ್ರಶಾಂತ್ ವರ್ಮಾ ಕಾಂಬಿನೇಷನ್‌ನಲ್ಲಿ ಈಗಾಗಲೇ ‘ಜೈ ಹನುಮಾನ್’ ಸಿನಿಮಾ ಘೋಷಣೆಯಾಗಿದೆ. ಈ ಮಧ್ಯೆ, ಹಿಂದಿಯಲ್ಲಿ ಹನುಮಂತ ಕುರಿತು ಮತ್ತೊಂದು ಚಿತ್ರ ಬರಲಿದ್ದು, ‘ಚಿರಂಜೀವಿ ಹನುಮಾನ್- ದ ಎಟರ್ನಲ್’ ಎಂದು ಶೀರ್ಷಿಕೆ ಇಡಲಾಗಿದೆ. ಸಂಪೂರ್ಣ ಕೃತಕ ಬುದ್ಧಿಮತ್ತೆ (ಎಐ) ರೂಪದಲ್ಲಿ ನಿರ್ಮಿಸುತ್ತಿರುವುದು ಈ ಚಿತ್ರದ ವಿಶೇಷ. ಆ ಮೂಲಕ ಎಐನಲ್ಲಿ ಮೂಡಿಬರುವ ಭಾರತದ ಮೊದಲ ಪೌರಾಣಿಕ ಸಿನಿಮಾ ಎಂಬ ಹಿರಿಮೆಗೆ ಈ ಸಿನಿಮಾ ಪಾತ್ರವಾಗುತ್ತಿದೆ. ಮರಾಠಿಯ ‘ವೆಂಟಿಲೇಟರ್’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ರಾಜೇಶ್ ಮಾಪುಸ್ಕರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಹನುಮಂತನ ಪೌರಾಣಿಕ ಹಿನ್ನೆಲೆ, ಸಾಹಸ ಹಾಗೂ ಆಧ್ಯಾತ್ಮಿಕ ಹಾದಿಯನ್ನು ಇಲ್ಲಿ ನಿರೂಪಿಸಲಾಗುತ್ತದೆ ಎಂದು ತಿಳಿದುಬಂದಿದೆ. ಚಿತ್ರಕ್ಕೆ ವಿಕ್ರಮ್ ಮಲ್ಹೋತ್ರಾ ಬಂಡವಾಳ ಹೂಡುತ್ತಿದ್ದು, ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ. ಗ್ಯಾಲೆರಿ ಕಂಪನಿಯ ಸುಮಾರು 50ಕ್ಕೂ ಹೆಚ್ಚು ಎಐ ಇಂಜಿಯರ್‌ಗಳು ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಇನ್ನು, 2026ರ ಹನುಮಾನ್ ಜಯಂತಿಗೆ ಸಿನಿಮಾ ರಿಲೀಸ್ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net