

ಚಿಕ್ಕಣ್ಣ ಮತ್ತು ಶಿಶಿರ ಮುಖ್ಯಪಾತ್ರದಲ್ಲಿ ನಟಿಸಿರುವ ‘ಬಿಲ್ಗೇಟ್ಸ್’ ಸಿನಿಮಾ ಇಂದು ರಿಲೀಸ್ ಆಗುತ್ತಿದ್ದು, ಇದು ಹಾರರ್ ಮತ್ತು ಫ್ಯಾಂಟಸಿ ಸಬ್ಜೆಕ್ಟ್ ಹೊಂದಿದೆಯಂತೆ. ‘ಇದೊಂದು ಕಂಪ್ಲೀಟ್ ಎಂಟರ್ಟೇನ್ವೆುಂಟ್ ಸಿನಿಮಾ. ಕಾಮಿಡಿ, ಸೆಂಟಿಮೆಂಟ್, ಹಾರರ್, ಫ್ಯಾಂಟಸಿ.. ಈ ಚಿತ್ರದಲ್ಲಿರುವ ಪ್ರಮುಖ ಅಂಶಗಳು.
‘ಸಿನಿಮಾ ನೋಡಿದ ಪ್ರೇಕ್ಷಕರು ನಕ್ಕು ನಕ್ಕು ಹೊರ ಹೋಗುತ್ತಾರೆ. ನಾವು ಅದೇ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್. ‘ಬೃಹತ್ ಸೆಟ್ಗಳು, ಅದ್ಭುತ ಗ್ರಾಫಿಕ್ಸ್ ಜತೆಗೆ ಕಲಾವಿದರ ಅಭಿನಯವೂ ಉತ್ತಮವಾಗಿದೆ. ಪ್ರತಿ ದೃಶ್ಯ- ಹಾಡು ಹೀಗೇ ಬರಬೇಕೆಂದು ಪಟ್ಟು ಹಿಡಿದು, ಇಡೀ ತಂಡ ಕೆಲಸ ಮಾಡಿದೆ. ಈ ಚಿತ್ರದಲ್ಲಿ 40 ನಿಮಿಷಗಳಷ್ಟು ಗ್ರಾಫಿಕ್ಸ್ ವರ್ಕ್ ಇದ್ದು, ಆ ಮೂಲಕ ಪ್ರೇಕ್ಷಕನಿಗೆ ಫ್ಯಾಂಟಸಿ ಲೋಕ ತೋರಿಸುವ ಪ್ರಯತ್ನ ಮಾಡಿದ್ದೇವೆ.
ಇದಕ್ಕೆ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಲಾಗಿದೆ’ ಎನ್ನುತ್ತಾರೆ ನಿರ್ದೇಶಕರು. ‘ಶ್ರೀಪಾಂಚಜನ್ಯ ಸಿನಿ ಕ್ರಿಯೇಷನ್ಸ್’ ಮೂಲಕ ವಸಂತ್ ಕುಮಾರ್, ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್, ಸತ್ಯನಾರಾಯಣ ಹಾಗೂ ಗಿರೀಶ್ ಸೇರಿ ಸಾಕಷ್ಟು ಮಂದಿ ನಿರ್ವಪಕರಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಎಲ್ಲ ನಿರ್ವಪಕರು ಚಿತ್ರ ಚೆನ್ನಾಗಿ ಬಂದಿದೆ ಎಂಬ ಭರವಸೆಯಲ್ಲಿದ್ದು, ಜನರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುತ್ತಿದ್ದಾರೆ. ಚಿಕ್ಕಣ್ಣ ಮತ್ತು ಶಿಶಿರ ಅವರಿಗೆ ಜೋಡಿಯಾಗಿ ರೋಜಾ ಹಾಗೂ ಅಕ್ಷರಾ ರೆಡ್ಡಿ ನಟಿಸಿದ್ದಾರೆ. ಸಮಾನ ಅವಕಾಶದ ಜತೆಗೆ ಉತ್ತಮ ಪಾತ್ರ ಸಿಕ್ಕಿದ ಖುಷಿ ನಾಯಕಿಯರದ್ದು.