ಐದು ಆಫ್ರಿಕಾ ಚಿರತೆಗಳ ಬಿಗಿಯಾದ ಹಿಡಿತದಿಂದ ಜಿಂಕೆ ಪಾರು: ಈ ಪವಾಡವನ್ನೊಮ್ಮೆ ನೀವು ನೋಡಲೇಬೇಕು!

Cheetha
Published on

ನೈರೋಬಿ: ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಆಫ್ರಿಕಾ ಚಿರತೆಗಳ ಬಿಗಿಯಾದ ಹಿಡಿತದಿಂದ ಇಂಪಾಲವೊಂದು (ಜಿಂಕೆ ಜಾತಿಯ ಪ್ರಾಣಿ) ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಕೀನ್ಯಾದಲ್ಲಿ ನಡೆದಿದೆ.

ತನ್ನ ದೇಹದ ಹಿಂದೆ ಮತ್ತು ಕತ್ತಿನ ಭಾಗದಲ್ಲಿ ಬಿಗಿಯಾಗಿ ಹಿಡಿದಿದ್ದ ಚಿರತೆಗಳನ್ನು ಒಮ್ಮೆಲೆ ಬಲವಾಗಿ ಅಲುಗಾಡಿಸಿ, ಕೆಳಕ್ಕೆ ಬೀಳಿಸಿ ಛಂಗನೆ ಹಾರಿ ಇಂಪಾಲ ತಪ್ಪಿಸಿಕೊಂಡಿತು. ಬಳಿಕ ಎಲ್ಲ ಚಿರತೆಗಳು ಅಟ್ಟಿಸಿಕೊಂಡು ಬಂದರೂ ಅವುಗಳ ಕೈಗೆ ಸಿಲುಕದೆ ತನ್ಮೂಲಕ ಚಿರತೆಗಳಿಗೆ ಇಂಪಾಲ ಚಳ್ಳೆಹಣ್ಣು ತಿನ್ನಿಸಿ ಬಹಳ ಉಪಾಯವಾಗಿ ಪರಾರಿಯಾಯಿತು.

ಈ ಅದ್ಭುತ ದೃಶ್ಯವನ್ನು ಬ್ರಿಟಿಷ್​ ಫೋಟೋಗ್ರಾಫರ್​ ಕೆವಿನ್​ ರೋನಿ(53) ಎಂಬುವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಯಿಡಿದಿದ್ದಾರೆ. ಕೀನ್ಯಾದ ನಾಬೈಶೋ ಕನ್ಸರ್ವೆನ್ಸಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. (ಏಜೆನ್ಸೀಸ್​)

Cheetha 4
Cheetha
Chetha 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net