ಜೂ.10ಕ್ಕೆ ಚಾರ್ಲಿ ಬಿಡುಗಡೆ

Charilie
Published on

ಬೆಂಗಳೂರು: ಎಲ್ಲ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಕೆಲವು ಚಿತ್ರಗಳು ಬಿಡುಗಡೆ ಆಗಿ ಹೋದವು. ಆದರೆ, ರಕ್ಷಿತ್ ಅಭಿನಯದ ‘777 ಚಾರ್ಲಿ’ ಚಿತ್ರದ ಸುದ್ದಿಯೇ ಇರಲಿಲ್ಲ. ವರ್ಷದ ಕೊನೆಯ ವಾರ ರಕ್ಷಿತ್ ಲಕ್ಕಿ ವಾರವಾದ್ದರಿಂದ, ‘777 ಚಾರ್ಲಿ’ ಈ ವರ್ಷದ ಕೊನೆಗೆ ಬಿಡುಗಡೆಯಾದರೆ ಆಶ್ಚರ್ಯವಿಲ್ಲ ಎಂಬ ಮಾತು ಸಹ ಕೇಳಿ ಬಂತು.

ಹೀಗಿರುವಾಗಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಲಾಗಿದೆ. ಅದರಂತೆ ಜೂನ್ 10ಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ಏಕಕಾಲಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಲ್ಲಿಗೆ ಬಿಡುಗಡೆಯ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿದ್ದು, ಯಾವ್ಯಾವ ಭಾಷೆಗಳ ವಿತರಣೆಯ ಹಕ್ಕುಗಳನ್ನು ಯಾರ್ಯಾರು ತೆಗೆದುಕೊಂಡಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net