ಚಂದನಾ ಬಣ್ಣದ ಕನಸು ಸೀರಿಯಲ್ಲೂ ಬೇಕು, ಸಿನಿಮಾನೂ ಇಷ್ಟ ...

Chandana Ananthakrishna
Published on

ಬೆಂಗಳೂರು: ಹೆಸರಿಗೆ ತಕ್ಕಂತೆ ಚೆಂದದ ಹುಡುಗಿ ಚಂದನಾ ಅನಂತಕೃಷ್ಣ, ‘ರಾಜ ರಾಣಿ’ ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಯವಾದ ಚಂದನಾ, ನಂತರ ‘ಬಿಗ್ ಬಾಸ್’ಗೆ ಹೋಗಿ ಬಂದರು. ‘ಹಾಡು ಕರ್ನಾಟಕ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೀಗ ಹೊಸದೊಂದು ಧಾರಾವಾಹಿಯ ಮೂಲಕ ವಾಪಸ್ಸಾಗಲು ಸಜ್ಜಾಗುತ್ತಿದ್ದಾರೆ.

ಚಿಕ್ಕಂದಿನಿಂದಲೂ ಡಾನ್ಸ್​ನಲ್ಲಿ ಚಂದನಾ ಮುಂದು. ಕ್ಲಾಸಿಕಲ್ ಡಾನ್ಸರ್ ಆಗಿದ್ದರಿಂದ ನಟನೆಯ ಸುಲಭವಾಗಿಯೇ ಒಲಿದಿತ್ತು. ಅಷ್ಟೇ ಅಲ್ಲ ವೀಣೆ ನುಡಿಸುವುದರ ಜತೆಗೆ ಗಾಯನದಲ್ಲಿಯೂ ಚಂದನಾ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ‘ಯಾರಾದರೂ ಮುಂದೆ ನೀನು ಏನಾಗಬೇಕು ಎಂದು ಕೇಳಿದರೆ, ನಟಿಯಾಗಬೇಕು, ಗಾಯಕಿಯಾಗಬೇಕು, ನೃತ್ಯಗಾರ್ತಿಯಾಗಬೇಕು, ನಿರೂಪಕಿಯಾಗಬೇಕು ಹೀಗೆ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಎಲ್ಲದರಲ್ಲಿಯೂ ಗುರುತಿಸಿಕೊಳ್ಳಬೇಕೆಂಬುದು ನನ್ನ ಆಸೆ’ ಎಂದು ತಮ್ಮ ಮಲ್ಟಿಟ್ಯಾಲೆಂಟ್ ಬಗ್ಗೆ ಹೇಳಿಕೊಳ್ಳುತ್ತಾರೆ ಚಂದನಾ.

ಇನ್ನು ಸಿನಿಮಾಗಳಲ್ಲಿ ನಟಿಸುವ ತಮ್ಮ ಕನಸಿನ ಬಗ್ಗೆ ಮಾತನಾಡುವ ಅವರು, ‘ಸಿನಿಮಾ ಆಸಕ್ತಿ ಮೊದಲಿಂದಲೂ ಇದೆ. ಹಾಗಂತ ಅವಕಾಶ ಸಿಕ್ಕಿತು ಎಂದು ನೇರವಾಗಿ ನಟಿಸುವುದಿಲ್ಲ. ಸಿನಿಮಾ ಎಂಟ್ರಿಗೆ ನನ್ನದೇ ಆದ ಒಂದಷ್ಟು ಮಾನದಂಡಗಳಿವೆ. ಮೊದಲಿಗೆ ಒಳ್ಳೆಯ ಕಥೆ, ಒಳ್ಳೇ ಟೀಮ್ ನನ್ನ ಪಾತ್ರ ಹೀಗೆ ಇದೆಲ್ಲವನ್ನು ನೋಡಿಯೇ ಮುಂದುವರಿಯುತ್ತೇನೆ’ ಎಂಬುದು ಚಂದನಾ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net