ಕಣ್ಣೀರಾದ ಮುದ್ದುರಾಕ್ಷಸಿ; ವಿಚ್ಛೇದನದ ಬಳಿಕ ಆನ್​ಸ್ಕ್ರೀನ್​ನಲ್ಲಿ ಒಂದಾದ ಚಂದನ್​, ನಿವೇದಿತಾ

ascascasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ರ್ಯಾಪರ್​ ಚಂದನ್​ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಕಳೆದ ಜೂನ್​ನಲ್ಲಿ ವಿಚ್ಛೇದನ ಪಡೆದರು. ಆ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದರು. ನಂತರವೂ ಉತ್ತಮ ಫ್ರೆಂಡ್ಸ್​ ಆಗಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದರು. ಇದೀಗ ಈ ಜೋಡಿ ಆನ್​ಸ್ಕ್ರೀನ್​ ಒಂದಾಗಿದೆ. ಪುನೀತ್​ ಶ್ರೀನಿವಾಸ್​ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸೈಕೋ ಥ್ರಿಲ್ಲರ್​ ಜಾನರ್​ ಸಿನಿಮಾ "ಮುದ್ದುರಾಕ್ಷಸಿ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಸಿನಿಮಾ ಸೆಟ್ಟೇರಿದ್ದರೂ, ಕಾರಣಾಂತರಗಳಿಂದ ಶೂಟಿಂಗ್​ ತಡವಾಗಿದ್ದು, ಇತ್ತೀಚೆಗಷ್ಟೆ ಚಂದನ್​ ಮತ್ತು ನಿವೇದಿತಾ ಜತೆ ಕೆಲ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಯಿತು. ಬನ್ನೇರುಟ್ಟ ರಸ್ತೆಯ ವಜ್ರಮುನಿ ಾಮ್​ರ್ಹೌಸ್​ನಲ್ಲಿ ಬಾಕಿ ಉಳಿದಿದ್ದ ಕೆಲ ಭಾವನಾತ್ಮಕ ದೃಶ್ಯಗಳ ಶೂಟಿಂಗ್​ನಲ್ಲಿ ವಿಚ್ಛೇದನದ ಬಳಿಕ ಚಂದನ್​ ಮತ್ತು ನಿವೇದಿತಾ ಮೊದಲ ಬಾರಿ ಮುಖಾಮುಖಿಯಾದರು. ಅಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬೀಳ್ಕೊಡುವ ಸನ್ನಿವೇಶದ ಚಿತ್ರೀಕರಣ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ಲಿಸರಿನ್​ ಹಾಕದೆಯೇ ನಿವೇದಿತಾ ಕಣ್ಣಂಚಲ್ಲಿ ನೀರು ತುಂಬಿ ಬಂದಿದ್ದನ್ನು ನೋಡಿ, ಸೆಟ್​ನಲ್ಲಿದ್ದವರೂ ಒಂದು ಕ್ಷಣ ಭಾವುಕರಾದರು. "ಮುದ್ದುರಾಕ್ಷಸಿ' ವಿಭಿನ್ನ ರೊಮ್ಯಾಂಟಿಕ್​ ಲವ್​ಸ್ಟೋರಿಯಾಗಿದ್ದು, ಜತೆಗೆ ಸೈಕೋ ಥ್ರಿಲ್ಲರ್​ ಜಾನರ್​ ಚಿತ್ರವಾಗಿದೆ. ಸಿನಿಮಾ ಎಂ.ಎಸ್​. ತ್ಯಾಗರಾಜ್​ ಸಂಗೀತ ಮತ್ತು ಕರುಣಾಕರ್​ ಛಾಯಾಗ್ರಹಣದಲ್ಲಿ ಮೂಡಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net