

| ಹರ್ಷವರ್ಧನ್ ಬ್ಯಾಡನೂರು
"ಮಹೀರಾ' ಮೂಲಕ ಪದಾರ್ಪಣೆ ಮಾಡಿ "ತಲೆದಂಡ', "ಟೋಬಿ', "ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಸಿನಿಮಾಗಳಲ್ಲಿ ಅದ್ಭುತ ನಟನೆಯ ಮೂಲಕ ಗಮನ ಸೆಳೆದ ನಟಿ ಚೈತ್ರಾ ಜೆ. ಆಚಾರ್. ಸದ್ಯ ಚೈತ್ರಾ "ಉತ್ತರಕಾಂಡ'ದಲ್ಲಿ ನಟಿಸುತ್ತಿದ್ದು, ಅದರ ಜತೆಗೆ ಇತ್ತೀಚೆಗಷ್ಟೆ ತಮಿಳಿಗೂ ಹಾರಿದ್ದಾರೆ. ಸಿದ್ಧಾರ್ಥ್ ಜತೆ ಒಂದು ಹಾಗೂ ಶಶಿಕುಮಾರ್ ಜತೆ ಇನ್ನೊಂದು ಹೀಗೆ ಎರಡು ಕಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ಅದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.
ತಮಿಳು ಆಫರ್ ಬಂದಿದ್ದು…
ಕಾಲಿವುಡ್ ಅವಕಾಶದ ಬಗ್ಗೆ ಚೈತ್ರಾ, ""ಟೋಬಿ', "ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳನ್ನು ನೋಡಿ ಕಳೆದ ೆಬ್ರವರಿಯಲ್ಲಿ ನನ್ನನ್ನು ತಮಿಳು ತಂಡದವರು ಸಂಪರ್ಕಿಸಿದ್ದರು. ಪಾತ್ರ, ಕಥೆ ಇಷ್ಟವಾಗಿ ಒಪ್ಪಿಕೊಂಡೆ. ಇದೀಗ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಸೋಮವಾರ ಮುಹೂರ್ತ ನೆರವೇರಿತು, ಇಂದಿನಿಂದ ಶೂಟಿಂಗ್ ಪ್ರಾರಂಭ. ಶಾಲೆಯಲ್ಲಿ ಹಲವರು ತಮಿಳು ಮಾತನಾಡುತ್ತಿದ್ದ ಕಾರಣ ನನಗೂ ಭಾಷೆ ಅರ್ಥವಾಗುತ್ತಿತ್ತು. ಮಾತನಾಡಲು ಬರೋದಿಲ್ಲ ಅಂತ ಭಯವಿತ್ತು. ಆದರೆ, ಬರುವವರೆಗೂ ಬಿಡಬಾರದು ಅಂತ ಡೈಲಾಗ್ಸ್, ಉಚ್ಛಾರದ ಬಗ್ಗೆ ಹೆಚ್ಚು ಗಮನ ಹರಿಸಿ ಕಲಿಯುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.
ಕಲೆಗೆ ಗಡಿಯಿಲ್ಲ
ಪರಭಾಷೆಗಳಲ್ಲಿ ನಟಿಸುವ ಬಗ್ಗೆ, "ಕಲಾವಿದರು ಗೋಡೆ ನಿರ್ಮಿಸಿಕೊಳ್ಳಬಹುದಷ್ಟೇ. ಆದರೆ, ಕಲೆಗೆ ಗಡಿಯಿಲ್ಲ' ಎನ್ನುವ ಚೈತ್ರಾ, "ನನಗೆ ಕನ್ನಡದಲ್ಲಿ ಕೆಲಸ ಇಲ್ಲ ಅಂತಲ್ಲ. ನನಗೆ ಆ್ಯಕ್ಟಿಂಗ್ ಅಂದರೆ ತುಂಬ ಇಷ್ಟ. ಯಾವ ಭಾಷೆಯಲ್ಲಿ, ಯಾವ ಮಾಧ್ಯಮದಲ್ಲಿ ಅವಕಾಶ ಸಿಕ್ಕರೂ ನಟಿಸುತ್ತೇನೆ. ಒಂದೇ ಭಾಷೆಯಲ್ಲಿ ಒಂದು ಸಿನಿಮಾ ಮಾಡುವುದಕ್ಕೂ, ಅದೇ ಸಮಯದಲ್ಲಿ ಹತ್ತು ಭಾಷೆಗಳಲ್ಲಿ ಹತ್ತು ಸಿನಿಮಾಗಳನ್ನು ಮಾಡುವುದಕ್ಕೂ ವ್ಯತ್ಯಾಸವಿದೆ. ಕೆಲಸ ಮಾಡುತ್ತಿರಬೇಕಷ್ಟೇ' ಎನ್ನುತ್ತಾರೆ.
ಎರಡು ಪಾತ್ರಗಳೂ ಭಿನ್ನ
ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಚೈತ್ರಾ, ಇದೀಗ ತಮಿಳಿನಲ್ಲೂ ಭಿನ್ನ ರೋಲ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. "ಒಂದು ಚೆನ್ನೆ$ನಲ್ಲೇ ನಡೆಯುವ ಫ್ಯಾಮಿಲಿ ಡ್ರಾಮಾ. ಅದರಲ್ಲಿ ಸಿದ್ಧಾರ್ಥ್ಗೆ ನಾಯಕಿಯಾಗಿ ನಗರದ ಸಾಮಾನ್ಯ ಹುಡುಗಿಯ ಪಾತ್ರ. ಮತ್ತೊಂದು "ಜೋಕರ್', "ಜಪಾನ್' ಖ್ಯಾತಿಯ ರಾಜು ಮುರುಗನ್ ನಿರ್ದೇಶಿಸುತ್ತಿರುವ ಸಿನಿಮಾ. ಅದು ಮಧುರೈನ ಕೋವಿಲ್ಪಟ್ಟಿ ಎಂಬ ಹಳ್ಳಿಯಲ್ಲಿ ನಡೆಯುವ ಕಥೆ. ಅದರಲ್ಲಿ ಶಶಿಕುಮಾರ್ ಜತೆ ತೆರೆ ಹಂಚಿಕೊಳ್ಳಲಿದ್ದೇನೆ. ಎರಡೂ ಬೇರೆ ಬೇರೆ ಜಾನರ್ ಚಿತ್ರಗಳಾದರೂ ಎಮೋಷನ್ಸ್ ಸುತ್ತ ಸುತ್ತುವ ಕಥೆಯಿದೆ. ನಾನೇ ಡಬ್ ಮಾಡಬೇಕು ಅಂತ ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.
ದೊಡ್ಡ-ಸಣ್ಣ, ಎಲ್ಲವೂ ಮುಖ್ಯ
ಕೆಲವರು ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಅಂತ ಹೋಲಿಕೆ ಮಾಡುವುದುಂಟು. ಆದರೆ, ಚೈತ್ರಾ ಭಿನ್ನ.
"ದೊಡ್ಡ ಸಿನಿಮಾಗಳಲ್ಲಿ ನಟಿಸಿದರೆ, ನಾವು ಹೆಚ್ಚು ಜನರಿಗೆ ತಲುಪುತ್ತೇವೆ. ಸಣ್ಣ ಸಿನಿಮಾಗಳು ನಮ್ಮಿಂದ ಹೆಚ್ಚು ಜನರಿಗೆ ತಲುಪುತ್ತವೆ' ಎನ್ನುವ ಅವರು, "ಹಾಗಂತ ನಾನು ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ಕಂಟೆಂಟ್ ತುಂಬ ಮುಖ್ಯ. ಕಥೆ ಇಷ್ಟವಾಗಬೇಕು' ಎನ್ನುತ್ತಾರೆ.
ಮುಂದಿನ ಪ್ರಾಜೆಕ್ಟ್ಗಳು
ಚೈತ್ರಾಗೆ ಹಿಂದಿ ವೆಬ್ಸಿರೀಸ್ನಲ್ಲೂ ಅವಕಾಶ ಬಂದಿದ್ದು, "ಸದ್ಯಕ್ಕಿನ್ನೂ ಮಾತುಕತೆ ನಡೆಯುತ್ತಿದೆ. ಹಾಗೇ ಕನ್ನಡದಲ್ಲಿ ಹರಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಶೇಕಡಾ 80ರಷ್ಟು ಶೂಟಿಂಗ್ ಆಗಿದೆ. ನನಗೆ ಆ್ಯಕ್ಟಿಂಗ್ ತುಂಬ ಇಷ್ಟ. ಸಿನಿಮಾ, ವೆಬ್ಸರಣಿ, ನಾಟಕ ಅಂತ ಭೇದಭಾವ ಮಾಡುವುದಿಲ್ಲ. ಎಲ್ಲೂ ಕೆಲಸ ಸಿಗದಿದ್ದರೆ ಬೀದಿ ನಾಟಕ ಮಾಡುತ್ತೇನೆ. ಅಪ್ಪ ಟೀಚರ್, ನಮ್ಮ ಸಾಮರ್ಥ್ಯವನ್ನು ರ್ನಿಬಂಧಿಸಬಾರದು ಅಂತ ಯಾವಾಗಲೂ ಹೇಳುತ್ತಿದ್ದರು. ನಾನೂ ಅದನ್ನೇ ಫಾಲೋ ಮಾಡುತ್ತೇನೆ' ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಚೈತ್ರಾ.
ಐ ಡೋಂಟ್ ಕೇರ್
ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಸಾಮಾನ್ಯ. ಪ್ರಾರಂಭದಲ್ಲಿ ಅಂತಹ ಕಾಮೆಂಟ್ಗಳ ಬಗ್ಗೆ ಚೈತ್ರಾ ತಲೆ ಕೆಡಿಸಿಕೊಳ್ಳುತ್ತಿದ್ದರಂತೆ. "ಪರಿಚಯವಿಲ್ಲ, ನನ್ನ ಬಗ್ಗೆ ಏನೂ ಗೊತ್ತಿಲ್ಲ. ಆದರೂ ಯಾಕೆ ಹೀಗೆಲ್ಲಾ ಮಾತಾಡುತ್ತಾರೆ ಅಂತ ಬೇಸರವಾಗುತ್ತಿತ್ತು. ಆದರೆ, ಈಗ ಟ್ರೋಲ್ಸ್, ನೆಗಟಿವ್ ಕಮೆಂಟ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನಮ್ಮದೇ ಸಾವಿರ ತಲೆಯಲ್ಲಿ ಓಡುತ್ತಿರುತ್ತದೆ. ನಮ್ಮ ನೋವುಗಳನ್ನು ಮುಚ್ಚಿಟ್ಟುಕೊಂಡು ಕ್ಯಾಮರಾ ಮುಂದೆ ನಿಂತು ನಟಿಸಬೇಕಾಗುತ್ತದೆ. ಅದರ ಮಧ್ಯೆ ಈ ತಲೆಬಿಸಿ ಯಾಕೆ ಅಂತ ಮೂರು ವರ್ಷಗಳ ಹಿಂದೆಯೇ ಇನ್ಸ್ಟಾದಲ್ಲಿ ಕಮೆಂಟ್ ಆ್ ಮಾಡಿದ್ದೇನೆ. ಆದರೆ, ಅತಿ ಆಯಿತು ಅಂದಾಗ ಕಾನೂನು ಕ್ರಮ ಕೈಗೊಳ್ಳುವ ಅವಕಾಶವೂ ಇದೆ' ಎನ್ನುತ್ತಾರೆ.