ಆಗಸ್ಟ್​ನಲ್ಲೇ 'ಚಡ್ಡಿದೋಸ್ತ್' ಬಿಡುಗಡೆ ... ಸದ್ಯದಲ್ಲೇ ದಿನಾಂಕ ಘೋಷಣೆ

Chaddi Dost Kaddi Alladisbutta - Final
Published on

ಬೆಂಗಳೂರು: ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಿರ್ಮಾಣದ, ಆಸ್ಕರ್ ಕೃಷ್ಣ ನಿರ್ದೇಶನದ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರವು ಇದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ.

ಕೋವಿಡ್​ನಿಂದ ತತ್ತರಿಸಿದ್ದ ಚಿತ್ರರಂಗ ಇದೀಗ ಹಂತಹಂತವಾಗಿ ಚೇತರಿಸಿಕೊಳ್ಳುತ್ತಿದ್ದು, ಈಗಾಗಲೇ ಚಟುವಟಿಕೆಗಳು ಆರಂಭವಾಗಿವೆ. ಅದರಲ್ಲೂ ಚಿತ್ರಪ್ರದರ್ಶನ ಪ್ರಾರಂಭವಾಗಿದ್ದು, ಈ ನಿಟ್ಟಿನಲ್ಲಿ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರತಂಡ ಸಹ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ರಾಜ್ಯದ್ಯಾಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.

ಮೊದಲ ಲಾಕ್​ಡೌನ್​ ಮುಗಿದ ನಂತರ ಚಿತ್ರೀಕರಣಗೊಂಡಿರುವ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರದಲ್ಲಿ ಆಸ್ಕರ್ ಕೃಷ್ಣ, ಲೋಕೇಂದ್ರ ಸೂರ್ಯ, ಗೌರಿ ನಾಯರ್ ಜೊತೆಗೆ ನಿರ್ಮಾಪಕ ಸೆವೆನ್ ರಾಜ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅನಂತ್​ ಆರ್ಯನ್​ ಸಂಗೀತ ಸಂಯೋಜಿಸಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್, 'ಜೋಗಿ' ಸುನಿತಾ ಮತ್ತಿತರರು ಹಾಡಿರುವ ಹಾಡುಗಳು ಕೇಳುಗರ ಮೆಚ್ಚುಗೆ ಪಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net