ಆದರೆ, ಪತ್ರವನ್ನು ತಾವೇ ಭಾಷಾಂತರಿಸಲು ಸಮಯವಿಲ್ಲದ ಕಾರಣ, ಮನೆಯಲ್ಲೇ ಹೋಮ್‌ವರ್ಕ್ ಮಾಡುತ್ತಿದ್ದ ತಮ್ಮ ಅವಳಿ ಪುತ್ರರಾದ ವಿನ್‌ಸ್ಟನ್ ಮತ್ತು ವಿರಾಜ್ ಕೈಗೆ ಕೊಟ್ಟು ಓದಲು ಹೇಳಿದರು. ಅಮ್ಮಾ, ಇದು ಡಿವೋರ್ಸ್ ನೋಟಿಸ್ ಎಂದು ಮಕ್ಕಳು ಓದಿದಾಗ ಸೆಲಿನಾ ಒಂದು ಕ್ಷಣ ಗಾಬರಿಯಾಗಿದ್ದರು. ಆ ನೋಟಿಸ್‌ನಲ್ಲಿ ದಾಂಪತ್ಯ ಜೀವನವು ಸರಿಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಉಲ್ಲೇಖಿಸಿ, ಸೆಲಿನಾ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಆ ಕರಾಳ ನೋಟಿಸ್ ಅನ್ನು ಸ್ವತಃ ತನ್ನ ಮಕ್ಕಳೇ ಓದಬೇಕಾಗಿ ಬಂದಿದ್ದಕ್ಕೆ ನಟಿ ಇಂದಿಗೂ ಭಾವುಕರಾಗುತ್ತಾರೆ.